Select Your Language

Notifications

webdunia
webdunia
webdunia
webdunia

ಜಲ್ಲಿಕಟ್ಟುಗೆ ಜೈ: ಸುಗ್ರಿವಾಜ್ಞೆ ಜಾರಿ

ಜಲ್ಲಿಕಟ್ಟುಗೆ ಜೈ: ಸುಗ್ರಿವಾಜ್ಞೆ ಜಾರಿ
ಚೆನ್ನೈ , ಶನಿವಾರ, 21 ಜನವರಿ 2017 (17:58 IST)
ಸಾಂಪ್ರದಾಯಿಕ ಜಲ್ಲಿಕಟ್ಟು ಕ್ರೀಡೆಯ ಮೇಲಿದ್ದ ನಿಷೇಧಕ್ಕೆ ತಡೆ ಕೋರಿ ಕ್ರಾಂತಿಕಾರಕ ಹೋರಾಟ ನಡೆಸಿದ್ದ ತಮಿಳುನಾಡಿನ ಜನರಿಗೆ ಕೊನೆಗೂ ಜಯ ಸಿಕ್ಕಿದೆ. ಜನರ ರಾಜ್ಯಪಾಲ್ ವಿದ್ಯಾಸಾಗರರಾವ್ ಜಲ್ಲಿಕಟ್ಟುಗೆ ಅನುಮತಿ ನೀಡಿ ಸುಗ್ರಿವಾಜ್ಞೆ ಜಾರಿಗೊಳಿಸಿದ್ದಾರೆ.  

ರಾಜ್ಯದ ಜನರ ಮನವಿಯನ್ನು ಪುರಸ್ಕರಿಸಿದ ಪ್ರಧಾನಿ ಮೋದಿಗೆ ಸಿಎಂ ಪನ್ನೀರ್ ಸೆಲ್ವಂ ಪತ್ರ ಮುಖೇನ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. 
 
ಸುಗ್ರೀವಾಜ್ಞೆ ಬೆನ್ನಲ್ಲೇ ಜಲ್ಲಿಕಟ್ಟು ಆಯೋಜಿಸಲು ಸಿದ್ಧತೆ ನಡೆಯುತ್ತಿದ್ದು ಈ ಸಂಬಂಧ ಅಧಿಕಾರಿಗಳ ಜತೆ  ಓ. ಪನ್ನೀರ್ ಸೆಲ್ವಂ ಸಮಾಲೋಚನೆ ನಡೆಸಿದ್ದಾರೆ. 
 
ನಾಳೆ ಮಧುರೈ ಜಿಲ್ಲೆಯ ಆಳಂಗಾನಲ್ಲೂರ್, ಆವಣ್ಯಪುರಂ, ಪಾವಮೇಡಗಳಲ್ಲಿ ಜಲ್ಲಿಕಟ್ಟನ್ನು ಆಯೋಜಿಸಲಾಗಿದ್ದು ಇಂದು ಪನ್ನೀರ್ ಸೆಲ್ವಂ ಮಧುರೈಗೆ ತೆರಳುತ್ತಿದ್ದಾರೆ.
 
ಜಲ್ಲಿಕಟ್ಟು ಮೇಲಿನ ನಿಷೇಧ ಕೋರಿ ಕಳೆದ ಐದು ದಿನಗಳಿಂದ ತಮಿಳುನಾಡಿನಲ್ಲಿ ಉಗ್ರ ಸ್ವರೂಪದ ಪ್ರತಿಭಟನೆ ನಡೆಸುತ್ತಿತ್ತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿಯ ಹಲವು ನಾಯಕರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ: ದಿನೇಶ್ ಗುಂಡೂರಾವ್