Select Your Language

Notifications

webdunia
webdunia
webdunia
webdunia

ನೇತಾಜಿ ಸಾವಿನ ಕುರಿತಾದ ಗೊಂದಲಕ್ಕೆ ತೆರೆ ಎಳೆದ ಕೇಂದ್ರ ಸರ್ಕಾರ

Government replied Subhash Chandra bose died in plane accident ನೇತಾಜಿ ಸಾವಿನ ಕುರಿತಾದ ಗೊಂದಲಕ್ಕೆ ತೆರೆ ಎಳೆದ ಕೇಂದ್ರ ಸರ್ಕಾರ ನೇತಾಜಿ
ನವದೆಹಲಿ , ಬುಧವಾರ, 31 ಮೇ 2017 (12:48 IST)
ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಶ್ ಚಂದ್ರ ಬೋಸ್ ಸಾವಿನ ಕುರಿತ 70 ವರ್ಷಗಳ ಗೊಂದಲಕ್ಕೆ ಕೇಂದ್ರ ಸರ್ಕಾರ ಕೊನೆಗೂ ತೆರೆ ಎಳೆದಿದೆ. ಆರ್`ಟಿಐ ಅರ್ಜಿಯೊಂದಕ್ಕೆ ಉತ್ತರಿಸಿರುವ ಗೃಹ ಇಲಾಖೆ  1945ರ ಆಗಸ್ಟ್ 18ರಂದು ತೈವಾನ್`ನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ನೇತಾಜಿ ಮೃತಪಟ್ಟಿದ್ದಾರೆ ಎಂದು ಸ್ಪಷ್ಟಪಡಿಸಿದೆ.
 

ಶಹನವಾಜ್ ಸಮಿತಿ, ಜೆಸ್ಟೀಸ್ ಜಿ.ಡಿ. ಖೋಸ್ಲಾ ಕಮೀಶನ್ ಮತ್ತು ಜಸ್ಟೀಸ್ ಮುಖರ್ಜಿ ಕಮೀಷನ್ ಸಲ್ಲಿಸಿದ್ದ ತನಿಖಾ ವರದಿಯನ್ನ ಆಧರಿಸಿ ಕೇಂದ್ರ ಗೃಹ ಇಲಾಖೆ ಈ ನಿರ್ಧಾರಕ್ಕೆ ಬಂದಿದೆ ಎಂದು ವರದಿಯಾಗಿದೆ. ನೇತಾಜಿ ಸಾವಿನ ಕುರಿತಾದ ಮಾಹಿತಿ ಸಯಕ್ ಸೇನ್ ಎಂಬುವರು ಆರ್`ಟಿಐ ಅಡಿ ಅರ್ಜಿ ಸಲ್ಲಿಸಿದ್ದರು. ಅಷ್ಟೇ ಅಲ್ಲ, ಸುಭಾಸ ಚಂದ್ರ ಬೋಸ್ 1985ರವರೆಗೂ ಬದುಕಿದ್ದರು, ಗುಮ್ನಾಮಿ ಬಾಬಾ ಹೆಸರಲ್ಲಿ ಉತ್ತರಪ್ರದೇಶದ ಅಜ್ಞಾತ ಸ್ಥಳದಲ್ಲಿ ವಾಸವಿದ್ದರು ಎಂಬ ಬಗ್ಗೆಯೂ ಮಾಹಿತಿ ಕೇಳಿ ಅರ್ಜಿ ಸಲ್ಲಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಇಲಾಖೆ, ಗುಮ್ನಾಮಿ ಬಾಬಾ ಕುರಿತ ಕೆಲ ಮಾಹಿತಿಗಳು ಮುಖರ್ಜಜಿ ಕಮೀಶನ್ ವರದಿಯ 114-122 ಪುಟಗಳಲ್ಲಿ ಲಭ್ಯವಿದೆ. ಗೃಹ ಿಲಾಖೆಯ ವೆಬ್ ಸೈಟ್`ನಲ್ಲಿ ವರದಿ ಲಭ್ಯವಿದೆ ಎಂದು ಹೇಳಿದೆ. ಗುಮ್ನಾಮಿ ಬಾಬಾ ಸುಭಾಶ ಚಂದ್ರ ಬೋಸ್ ಅಲ್ಲ. ಮುಖರ್ಜಿ ಕಮೀಶನ್ ಈ ಬಗ್ಗೆ ಸ್ಪಷ್ಟವಾಗಿ ಹೇಳಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಶೂಟಿಂಗ್ ವೇಳೆ ಸಂಭವಿಸಿದ ಅಪಘಾತ: ಶಾರುಖ್‌ ಖಾನ್‌ ಜಸ್ಟ್ ಎಸ್ಕೇಪ್