Webdunia - Bharat's app for daily news and videos

Install App

ಇಂದು ಗೂಗಲ್ ಹುಟ್ಟಿದಹಬ್ಬ: ಇದು ಹುಟ್ಟಿದ್ದು ಹೇಗೆ? ವೈಶಿಷ್ಟ್ಯಗಳೇನು?

Webdunia
ಸೋಮವಾರ, 27 ಸೆಪ್ಟಂಬರ್ 2021 (12:52 IST)
ನವದೆಹಲಿ : ಗೂಗಲ್ ಎಂದರೆ ತಿಳಿಯದ ಜನರೇ ಇಲ್ಲ ಎನ್ನುಬಹುದು. ಚಿಕ್ಕಪುಟ್ಟ ವಿಷಯ ಬೇಕಿದ್ದರೂ ತಲೆಯಿಂದ ಇಂದು ಯೋಚಿಸುವವರೇ ಕಮ್ಮಿ, ಕೂಡಲೇ ಕೈ ಗೂಗಲ್ನತ್ತ ಹೋಗುತ್ತದೆ.

ಹೀಗೆ ಇಡೀ ವಿಶ್ವವನ್ನೇ ತನ್ನತ್ತ ಸೆಳೆದುಕೊಂಡಿರುವ ಮಾಯಾವಿ ಗೂಗಲ್ನ 23ನೇ ಹುಟ್ಟುಹಬ್ಬವಿದು.
ಇದರ ನಿಮಿತ್ತ ಗೂಗಲ್ ತನ್ನ ಮುಖಪುಟದಲ್ಲಿ ವಿಶೇಷ ಡೂಡಲ್ ರಚಿಸಿದೆ. ಗೂಗಲ್  ತೆರೆದಂತೆ ಕೇಕ್ ಜೊತೆಗೆ '23' ಎಂದು ಬರೆದಿರುವ ಡೂಡಲ್ ವಿನ್ಯಾಸ ಕಾಣಿಸುತ್ತದೆ. ವಿಶೇಷ ವ್ಯಕ್ತಿಗಳ ಹುಟ್ಟಿದ ಹಬ್ಬ ಇಲ್ಲವೇ ಪುಣ್ಯತಿಥಿಯನ್ನು ನೆನಪಿಸುವ ಡೂಡಲ್ ಇಂದು ಖುದ್ದು ತನ್ನ ಹುಟ್ಟುಹಬ್ಬದ ಮೂಲಕ ಗಮನ ಸೆಳೆದಿದೆ.
ಅಂದ ಹಾಗೆ ಅಮೆರಿಕನ್ ಟೆಕ್ ಗೂಗಲ್ ಸರ್ಚ್ ಇಂಜಿನ್ ಹುಟ್ಟಿದ್ದು 1998ರ ಸೆಪ್ಟೆಂಬರ್ 4ರಂದು. ಆರಂಭದ ಏಳು ವರ್ಷ ತನ್ನ ಜನ್ಮ ವಾರ್ಷಿಕೋತ್ಸವವನ್ನು ಸೆಪ್ಟೆಂಬರ್ 4ರಂದೇ ಆಚರಿಸಿಕೊಂಡಿತು. ಆ ಬಳಿಕ ಸೆಪ್ಟೆಂಬರ್ 27ಕ್ಕೆ ಬದಲಾಯಿಸಲಾಯಿತು.
ಇಬ್ಬರು ಸ್ಟಾನ್ಫೋರ್ಡ್ನ ಪಿಎಚ್ಡಿ ವಿದ್ಯಾರ್ಥಿಗಳು ಸೇರಿಕೊಂಡು ಈ ಸರ್ಚ್ ಎಂಜಿನ್ ಅನ್ನು ಪ್ರಾರಂಭಿಸಿದ್ದರು. ವಿಶ್ವದ ಮಾಹಿತಿಯನ್ನು ಸಂಘಟಿತ ರೂಪದಲ್ಲಿ ಹಾಗೂ ಎಲ್ಲರಿಗೂ ಲಭ್ಯವಾಗುವ ಹಾಗೆ, ಪ್ರಯೋಜನವಾಗುವ ಹಾಗೆ ಮಾಡುವ ಪ್ರಮುಖ ಗುರಿ ಹಾಗೂ ಉದ್ದೇಶವನ್ನಿಟ್ಟುಕೊಂಡು ಗೂಗಲ್ ಅನ್ನು ಪ್ರಾರಂಭಿಸಲಾಗಿತ್ತು. 1998 ರಲ್ಲಿ ಗೂಗಲ್ ಎಂಬ ಸಣ್ಣ ಸರ್ಚ್ ಎಂಜಿನ್ ಕಂಪೆನಿಯನ್ನು ಸ್ಥಾಪಿಸಿದಾಗ ಇದು ಇಷ್ಟೊಂದು ದೊಡ್ಡ ಮಟ್ಟಕ್ಕೆ ಬೆಳೆಯುತ್ತದೆ ಎಂದು ಅವರು ಊಹಿಸಿರಲಿಲ್ಲ.
ವರದಿಗಳ ಪ್ರಕಾರ ಇಂದು ಗೂಗಲ್ ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಬೆಲೆಯನ್ನು ಹೊಂದಿರುವ ಮೂರನೇ ಅತಿದೊಡ್ಡ ಕಂಪೆನಿಯಾಗಿದೆ. ಅಂದಾಜು $ 150 ಬಿಲಿಯನ್ಗಿಂತಲೂ ಹೆಚ್ಚು ಒಟ್ಟು ಮೌಲ್ಯವನ್ನು ಗೂಗಲ್ ಒಡೆತನದ ಆಲ್ಫಾಬೀಟ್ ಸಂಸ್ಥೆ ಹೊಂದಿದೆ. ಸದ್ಯ ಗೂಗಲ್ನ ಪ್ರಸ್ತುತ ಸಿಇಒ ಆಗಿರುವುದು ಸುಂದರ್ ಪಿಚೈ. ಇದೀಗ ಗೂಗಲ್ ಕೇವಲ ವಿಷಯಗಳ ಹುಡುಕಾಟದ ಮಾಧ್ಯಮ ಆಗಿರದೇ ಹೊಸ ಹೊಸ ಆವಿಷ್ಕಾರಗಳ ಮೂಲಕ ನೂತನ ತಂತ್ರಜ್ಞಾನಗಳನ್ನೂ ರೂಪಿಸುತ್ತಿದೆ. ಮಾತು ಅಥವಾ ದೈಹಿಕ ನ್ಯೂನತೆ ಹೊಂದಿರುವ ಜನರಿಗೆ ಎರಡು ಹೊಸ ವೈಶಿಷ್ಟ್ಯಗಳನ್ನು ಹೊರತಂದಿದೆ. ಇತ್ತೀಚೆಗೆ ಬಿಡುಗಡೆಯಾದ ವೈಶಿಷ್ಟ್ಯಗಳ ಮೂಲಕ, ಬಳಕೆದಾರರು ಈಗ ತಮ್ಮ ಆಂಡ್ರಾಯ್ಡ್-ಚಾಲಿತ ಸ್ಮಾರ್ಟ್ಫೋನ್ಗಳನ್ನು ಹ್ಯಾಂಡ್ಸ್-ಫ್ರೀ ಆಗಿ ಬಳಸಬಹುದಾಗಿದೆ.
ಗೂಗಲ್ ಹೊಸ ಫೀಚರ್ಸ್ ಅನ್ನು ಗ್ರಾಹಕರಿಗೆ ಪರಿಚಯಿಸುತ್ತಲೇ ಇರುತ್ತದೆ. ಮಾತ್ರವಲ್ಲದೆ ನೂತನ ಫೀಚರ್ಸ್ಸಿದ್ಧಪಡಿಸಿ ಸ್ಮಾರ್ಟ್ಫೋನ್ ಅಪ್ಡೇಟ್ ಮಾಡುವ ಮೂಲಕ ಗ್ರಾಹಕರಿಗೆ ಎನಾದರು ಒಂದು ಹೊಸ ಕೊಡುಗೆ ನೀಡುತ್ತಿರುತ್ತದೆ. ಅದರಂತೆ ಇದೀಗ ಮುಖದ ಚರ್ಯೆಯಿಂದಲೇ ಸ್ಮಾರ್ಟ್ಫೋನ್ ನಿಯಂತ್ರಿಸಬಹುದಾದ ಫೀಚರ್ ಅನ್ನು ಕೂಡ ಇದು ಪರಿಚಯಿಸಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments