Select Your Language

Notifications

webdunia
webdunia
webdunia
webdunia

ಶಿವರಾತ್ರಿಯಂದು ಜನಿಸಿತು ಮೂರು ಕಣ್ಣಿನ ಕುರಿ ಮರಿ: ಜೋರಾಗಿ ಸಾಗಿದೆ ಪೂಜೆ

ಶಿವರಾತ್ರಿಯಂದು ಜನಿಸಿತು ಮೂರು ಕಣ್ಣಿನ ಕುರಿ ಮರಿ: ಜೋರಾಗಿ ಸಾಗಿದೆ ಪೂಜೆ
ನವದೆಹಲಿ , ಶುಕ್ರವಾರ, 24 ಫೆಬ್ರವರಿ 2017 (17:22 IST)
ಬುಂದೇಲಖಂಡದಲ್ಲಿ ಕುರಿಯೊಂದು ಮೂರು ಕಣ್ಣಿನ ಮರಿಗೆ ಜನ್ಮ ನೀಡಿದ್ದು, ಶಿವರಾತ್ರಿಯಂದು ಹುಟ್ಟಿರುವ ಈ ಮರಿ ಶಿವನ ವರದಾನ ಎಂದು ಸುತ್ತಮುತ್ತಲಿನ ಹಳ್ಳಿಯ ಜನರು ಅದಕ್ಕೆ ಪೂಜೆ ಸಲ್ಲಿಸುತ್ತಿದ್ದಾರೆ. 
ಮರಿಯ ದರ್ಶನಕ್ಕೆ ಸಾಲುಗಟ್ಟಿರುವ ಜನರು ಕಾಣಿಕೆಯಾಗಿ ಹಣದ ಸುರಿಮಳೆಗೈಯ್ಯುತ್ತಿದ್ದಾರೆ.
 
ಜನರೇನೋ ದೇವರ ವರದಾನ ಎಂದು ಆರಾಧಿಸುತ್ತಿದ್ದಾರೆ. ಆದರೆ ಪಶು ವೈದ್ಯರು ಇದು ವಿಕೃತವಾಗಿ ಹುಟ್ಟಿರುವ ಮರಿ ಎನ್ನುತ್ತಿದ್ದಾರೆ.
 
ಆದರೆ ವೈದ್ಯರ ವಾದವನ್ನು ಒಪ್ಪದಿರುವ ಜನರು, ಇದೇ ಮೊದಲ ಬಾರಿ ನಾವಿನಂತಹ ಅದ್ಭುತವನ್ನು ನೋಡುತ್ತಿರುವುದು.ಕುರಿಗೆ ಮೂರು ಕಣ್ಣಿರಿವುದು ಸಾಮಾನ್ಯ ವಿಷಯವೇನಲ್ಲ. ಇದೊಂದು ಚಮತ್ಕಾರ. ಭಗವಂತ ತನ್ನ ರೂಪವನ್ನು ತೋರಿಸಿದ್ದಾನೆ. ಇದೊಂದು ವಿಸ್ಮಯವೇ ಸರಿ ಎನ್ನುತ್ತಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ನಾಡಿನೆಲ್ಲೆಡೆ ಶಿವರಾತ್ರಿ ಸಂಭ್ರಮ