Select Your Language

Notifications

webdunia
webdunia
webdunia
webdunia

ಪ್ರಿಯತಮ ಮಾಡಿದ ಈ ನೀಚ ಕೆಲಸಕ್ಕೆ ಪ್ರೇಯಸಿ ಜೀವ ಬಲಿ

webdunia
ಒಡಿಶಾ , ಶನಿವಾರ, 2 ಫೆಬ್ರವರಿ 2019 (09:04 IST)
ಒಡಿಶಾ : ಪ್ರಿಯತಮ ಸಾಮಾಜಿಕ ಜಾಲತಾಣದಲ್ಲಿ ಪ್ರೇಯಸ್ಸಿಯ ಅಶ್ಲೀಲ ವೀಡಿಯೊವನ್ನು ಅಪ್ಲೋಡ್ ಮಾಡಿದ್ದಕ್ಕೆ ಆಕೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಒಡಿಶಾದ ಆಂಗಲ್ ಜಿಲ್ಲೆಯಲ್ಲಿ ನಡೆದಿದೆ.

ಮೃತ ಯುವತಿ ತಲ್ಚರ್ ಪ್ರದೇಶದ ಯುವಕನನ್ನು ಪ್ರೀತಿಸುತ್ತಿದ್ದು, ಇಬ್ಬರು ಡಿಯೋ ಕಾಲ್ ಮೂಲಕ ಮಾತನಾಡುತ್ತಿದ್ದರು. ಆದರೆ ಒಮ್ಮೆ ಪ್ರೇಯಸ್ಸಿ ತನ್ನ ಪ್ರಿಯತಮನಿಗೆ ವಿಡಿಯೋ ಕಾಲ್ ನಲ್ಲಿ ಖಾಸಗಿ ಅಂಗವನ್ನು ತೋರಿಸಿದ್ದಾಳೆ. ಆದರೆ ಪ್ರಿಯತಮ ಅದನ್ನು  ತನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿ ಬಳಿಕ ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದಾನೆ.

 

ಇದರಿಂದ ತೀವ್ರ  ಮುಜುಗರಕ್ಕೊಳಗಾದ ಪ್ರೇಯಸ್ಸಿ ಮನನೊಂದು ವಿಷ ಕುಡಿದಿದ್ದಾಳೆ. ತಕ್ಷಣ ಮನೆಯವರು  ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಯುವತಿ ಗುರುವಾರ ರಾತ್ರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

 

ಮೃತ ಯುವತಿಯ ಕುಟುಂಬದವರು ಬಾಂತಲಾ ಪೊಲೀಸ್ ಠಾಣೆಯಲ್ಲಿ ಯುವಕನ ವಿರುದ್ಧ ದೂರು ಸಲ್ಲಿಸಿದ್ದಾರೆ. ದೂರಿನ ಕುರಿತು ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 


Share this Story:

Follow Webdunia kannada

ಮುಂದಿನ ಸುದ್ದಿ

ವಿದೇಶಕ್ಕೆ ತೆರಳಬೇಕೆಂಬ ಆಸೆಯನ್ನು ಈಡೇರಿಸಿಕೊಳ್ಳಲು ಅಣ್ಣನನ್ನೇ ಮದುವೆಯಾದ ಯುವತಿ