Select Your Language

Notifications

webdunia
webdunia
webdunia
webdunia

ಪೊಲೀಸರ ಲಾಠಿ ಕಸಿದು ಕಾಮುಕರಿಗೆ ಹಿಗ್ಗಾಮುಗ್ಗಾ ಥಳಿಸಿದ ಯುವತಿ

police
ಲಕನೌ , ಮಂಗಳವಾರ, 21 ಮಾರ್ಚ್ 2017 (08:29 IST)
ಉತ್ತರಪ್ರದೇಶದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಹೆಚ್ಚುತ್ತಿದೆ. ತಮ್ಮನ್ನ ಮೇಲೆ ಕಣ್ಣು ಹಾಕುವ ಕಾಮುಕರ ಮೇಲೆ ಮಹಿಳೆಯರೇ ಅಲ್ಲಿ ದಾಳಿ ನಡೆಸುತ್ತಿದ್ದಾರೆ. ನಿನ್ನೆ ಲಖನೌದಲ್ಲಿ ತಮಗೆ ಕಿರುಕುಳ ನೀಡಿದ ರೊಡ್ ರೋಮಿಯೋಗೆ ಯುವತಿಯೇ ಲಾಠಿಯಿಂದ ಬಡಿದಿರುವ ಘಟನೆ ನಡೆದಿದೆ.
 

ಗೌತಮ್ ಪಾಲಿ ಪೊಲೀಸ್ ಠಾಣೆ ಮುಂದೆ ಈ ಘಟನೆ ನಡೆದಿದೆ. ಬೈಕ್`ನಲ್ಲಿ ಬಂದ ಪುಂಡರ ಗುಂಪು ಯುವತಿಯರ ಗುಂಪಿನ ಮೇಲೆ ಕಾಮದ ಕಣ್ಣು ಹಾಕಿತ್ತು. ಇನ್ನಿಲ್ಲದಂತೆ ಟೀಸ್ ಮಾಡಲು ಶುರುಮಾಡಿತ್ತು. ಪೊಲೀಸರು ಮೂಕಪ್ರೇಕ್ಷಕರಂತೆ ನೋಡುತ್ತಿದ್ದರು.

ಈ ಸಂದರ್ಭ ರೊಚ್ಚಿಗೆದ್ದ ಯುವತಿ ಪೊಲೀಸ್ ಕೈಯಿಂದ ಲಾಠಿ ಕಸಿದು ಹಿಗ್ಗಾಮುಗ್ಗಾ ಥಳಿಸಿದ್ದಾಳೆ. ಈ ದೃಶ್ಯ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಲೈಂಗಿಕ ದೌರ್ಜನ್ಯಕ್ಕೆ ತುತ್ತಾದ ಕೇಂದ್ರ ಸರ್ಕಾರದ ಮಹಿಳಾ ನೌಕರರಿಗೆ 90 ದಿನ ರಜೆ