Publish Date: Thu, 29 Jun 2017 (13:36 IST)
Updated Date: Thu, 29 Jun 2017 (13:40 IST)
ಮಂಗಳೂರು: ಮಂಗಳೂರು ಮೂಲದ ಯುವಕನ ದುರ್ನಡತೆಯಿಂದ ರೋಸಿಹೋದ ಯುವತಿಯೊಬ್ಬಳು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಆತನ ಬಗ್ಗೆ ಪೋಸ್ಟ್ ಮಾಡಿ ಆತನ ಮಾನ ಹರಾಜುಹಾಕಿದ್ದಾಳೆ.
ಬಿಹಾರದಲ್ಲಿ ವ್ಯಾಸಂಗಮಾಡುತ್ತಿರುವ ಮಂಗಳೂರು ಮೂಲದ ಯುವತಿ ರಶ್ಮಿ ಶೆಟ್ಟಿ ಅಲೊಶಿಯಸ್ ಡಿಗ್ರಿ ಕಾಲೇಜಿನ ಮುಂದೆ ನಡೆಯುತ್ತಿದ ವೇಳೆ ಯುವಕನೊಬ್ಬ ಹಿಂಬಾಲಿಸಿಕೊಂಡು ಬಂದು ಆಕೆ ದೇಹದ ಬಗ್ಗೆ ಅಸಭ್ಯವಾಗಿ ಮಾತನಾಡಿದ್ದ. ಇದರಿಂದ ಬೇಸರಗೊಂದ ಯುವತಿ ಯುವಕನ ವರ್ತನೆ ಬಗ್ಗೆ ಸಂಪೂರ್ಣವಾದ ವಿವರ, ಚಿತ್ರಗಳನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾಳೆ.
ಅಲ್ಲದೇ ನಾನು ನಿನ್ನ ನೋಟಕ್ಕೆ ಹೆದರಿ ಓಡಿಹೋಗಬಹುದು ಎಂದು ಕೊಂಡಿರುತ್ತೀಯ ಆದರೆ ನಾನು ನೀನಂದುಕೊಂಡಷ್ಟು ದುರ್ಬಲಳಲ್ಲ ಎಂದು ಹೇಳಿದ್ದಾಳೆ. ಅಲ್ಲದೇ ಆತನ ಬೈಕ್ ಫೋಟೊವನ್ನು ಕೂಡ ಪೋಸ್ಟ್ ಮಾಡಿದ್ದಾಳೆ. ಬೈಕ್ ನಂ: KA109EU0932 ಆಗಿದ್ದು, ಇದು ರಿಜ್ವಾನ್ ಅಹ್ಮದ್ ಎಂಬ ವ್ಯಕ್ತಿಗೆ ಸೇರಿದ ಬೈಕ್ ಆಗಿದ್ದು, ಮಂಗಲೂರು ರಿಜಿಸ್ಟ್ರೇಷನ್ ಹೊಂದಿದೆ. ಈತನ ಬೈಕ್ ನಂಬರ್ ಆಧಾರದ ಮೇಲೆ ಪೊಲೀಸರು ಈತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಯುವತಿ ಆಗ್ರಹಿಸಿದ್ದಾಳೆ.