Select Your Language

Notifications

webdunia
webdunia
webdunia
webdunia

ಅತ್ಯಾಚಾರವೆಸಗಿದ್ದನ್ನು ಬಹಿರಂಗ ಪಡಿಸಿದರೆ ಅಜ್ಜಿ ಕೆಲಸಕ್ಕೆ ಕುತ್ತು!

ಅತ್ಯಾಚಾರವೆಸಗಿದ್ದನ್ನು ಬಹಿರಂಗ ಪಡಿಸಿದರೆ ಅಜ್ಜಿ ಕೆಲಸಕ್ಕೆ ಕುತ್ತು!
ರಾಕ್ಸೌಲ್ , ಶುಕ್ರವಾರ, 28 ಅಕ್ಟೋಬರ್ 2016 (14:52 IST)
ಮನೆಪಾಠ ಹೇಳಿಸಿಕೊಳ್ಳಲು ಬಂದ ಬಾಲಕಿಯ ಮೇಲೆ ಶಿಕ್ಷಕನೇ ಅತ್ಯಾಚಾರವೆಸಗಿ ಗರ್ಭಿಣಿಯಾಗಿಸಿದ ಹೇಯ ಘಟನೆ ಬಿಹಾರದ ರಾಕ್ಸೌಲ್‌ನಲ್ಲಿ ನಡೆದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. 

ಆರೋಪಿಯನ್ನು ಧರ್ಮೇಂದ್ರ ಕುಮಾರ್ ಎಂದು ಗುರುತಿಸಲಾಗಿದ್ದು, ಶಾಲಾ ಶಿಕ್ಷಕನಾಗಿರುವ ಆತ ಬಿಡುವಿನ ವೇಳೆಯಲ್ಲಿ ವಿದ್ಯಾರ್ಥಿಗಳಿಗೆ ಟ್ಯೂಷನ್ ಹೇಳುತ್ತಿದ್ದ. ತನ್ನ ಬಳಿ ಪಾಠ ಹೇಳಿಸಿಕೊಳ್ಳಲು ಬರುತ್ತಿದ್ದ ವಿದ್ಯಾರ್ಥಿನಿಯ ಮೇಲಾತ ಕಳೆದ 5 ತಿಂಗಳ ಹಿಂದೆ ಅತ್ಯಾಚಾರವೆಸಗಿದ್ದು ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಶಾಲೆಯಲ್ಲಿ ಅಡುಗೆ ಮಾಡುವ ಕೆಲಸಕ್ಕೆ ಬರುತ್ತಿದ್ದ ಆಕೆಯ ಅಜ್ಜಿಯನ್ನು ಕೆಲಸದಿಂದ ಕಿತ್ತೆಸೆಯುವ ಬೆದರಿಕೆ ಹಾಕಿದ. 
 
ಘಟನೆ ನಡೆದ ಸ್ವಲ್ಪ ದಿನಗಳ ಬಳಿಕ ಬಾಲಕಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದ್ದು ವೈದ್ಯರ ಬಳಿ ಪರೀಕ್ಷೆ ನಡೆಸಿದಾಗ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದೆ. ಆಗ ಬಾಲಕಿ ನಡೆದ ಸತ್ಯವನ್ನು ಹೊರಹಾಕಿದ್ದಾಳೆ.
 
ಹೌಹಾರಿದ ಪೋಷಕರು ಮತ್ತೀಗ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಯಡ್ಡಿ ಬೆಂಬಲಿಗರಿಂದ ಪದ್ಮನಾಭ ಪ್ರಸನ್ನ ಮುಖಕ್ಕೆ ಮಸಿ