Select Your Language

Notifications

webdunia
webdunia
webdunia
webdunia

ಚಲಿಸುವ ವಾಹನದಲ್ಲಿ ಗ್ಯಾಂಗ್ ರೇಪ್, ವಿಡಿಯೋ

ಚಲಿಸುವ ವಾಹನದಲ್ಲಿ ಗ್ಯಾಂಗ್ ರೇಪ್, ವಿಡಿಯೋ
ಜೈಪುರ , ಶನಿವಾರ, 21 ಜನವರಿ 2017 (07:31 IST)
ಯುವತಿಯನ್ನು ಅಪಹರಿಸಿ ಚಲಿಸುತ್ತಿದ್ದ ವಾಹನದಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಹೇಯ ಕೃತ್ಯ ರಾಜಸ್ಥಾನದ ಜುಂಜುನು ಜಿಲ್ಲೆಯಲ್ಲಿ ನಡೆದಿದೆ.

ಐವರು ಆರೋಪಿಗಳು ಕಾಲೇಜು ವಿದ್ಯಾರ್ಥಿಗಳಾಗಿದ್ದು ಬಿ.ಎ ಓದುತ್ತಿದ್ದ ವಿದ್ಯಾರ್ಥಿಯನ್ನು ಅಪಹರಿಸಿ ಈ ಕೃತ್ಯವನ್ನೆಸಗಿದ್ದಾರೆ. ದುರುಳರು ತಮ್ಮ ಕೀಚಕ ಕೃತ್ಯದ ವಿಡಿಯೋವನ್ನು ಸಹ ಮಾಡಿಕೊಂಡಿದ್ದಾರೆ.ನಡೆದಿರುವ ಕೃತ್ಯದ ಬಗ್ಗೆ ಯಾರಿಗಾದರೂ ಈ ಬಗ್ಗೆ ತಿಳಿಸಿದರೆ ವಿಡಿಯೋವನ್ನು ಅಂತರ್ಜಾಲದಲ್ಲಿ ಹರಿಯಬಿಡುವುದಾಗಿ ವಿದ್ಯಾರ್ಥಿನಿಗೆ ಬೆದರಿಕೆ ಹಾಕಲಾಗಿತ್ತು. 
 
ಆದರೆ ಧೈರ್ಯಗೆಡದ ಯುವತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.
 
ಪ್ರಕರಣಕ್ಕೆ ಸಂಬಂಧಿಸಿದಂತೆ ಕೃತ್ಯಕ್ಕೆ ಬಳಸಿದ್ದ ಜೀಪ್ ವಶಪಡಿಸಿಕೊಂಡಿರುವ ಪೊಲೀಸರು ಆರೋಪಿಗಳಾದ ಹಿಮಾಂಶು, ಅರವಿಂದ, ಕುಲದೀಪ್, ವಿಜೇಂದ್ರ ಅವರನ್ನು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿಯ ಗುರುತು ಪತ್ತೆಯಾಗಿಲ್ಲ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ಸಿಗರನ್ನೇ ಗುರಿಯಾಗಿಸಿ ಐಟಿ ದಾಳಿ: ಸಿಎಂ ಸಿದ್ದರಾಮಯ್ಯ