Select Your Language

Notifications

webdunia
webdunia
webdunia
webdunia

ಅಪ್ರಾಪ್ತ ಬಾಲಕಿ ಮೇಲೆ ಗ್ಯಾಂಗ್ ರೇಪ್ ಮಾಡಿ, ಚಲಿಸುತ್ತಿದ್ದ ರೈಲಿನಿಂದ ಬಿಸಾಕಿದ ದುಷ್ಕರ್ಮಿಗಳು

ಅಪ್ರಾಪ್ತ ಬಾಲಕಿ ಮೇಲೆ ಗ್ಯಾಂಗ್ ರೇಪ್ ಮಾಡಿ, ಚಲಿಸುತ್ತಿದ್ದ ರೈಲಿನಿಂದ ಬಿಸಾಕಿದ ದುಷ್ಕರ್ಮಿಗಳು
ಪಾಟ್ನಾ , ಸೋಮವಾರ, 19 ಜೂನ್ 2017 (12:40 IST)
ಪಟ್ನಾ: ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆರು ಮಂದಿ ದುಷ್ಕರ್ಮಿಗಳು ಆಕೆಯನ್ನು ಚಲಿಸುತ್ತಿದ್ದ ರೈಲಿನಿಂದ ಹೊರಗೆ ಎಸೆದಿರುವ ಘಟನೆ  ಪಾಟ್ನಾದಲ್ಲಿ ನಡೆದಿದೆ.
 
ಬಾಲಕಿ ಕಿಯುಲ್ ರೈಲ್ವೆ ನಿಲ್ದಾಣದ ಬಳಿ ಪತ್ತೆಯಾಗಿದ್ದು, ರೈಲಿನಿಂದ ಹೊರಗೆಸೆದದ್ದರಿಂದ ಆಕೆಯ ಮೂಳೆಗಳು ಮುರಿದಿವೆ, ಗಂಭೀರವಾಗಿ ಗಾಯಗೊಂಡಿದ್ದಾಳೆ. ಪಟ್ನಾದ ಮೆಡಿಕಲ್ ಕಾಲೇಜಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
 
ಬಾಲಕಿಯನ್ನು ಆಕೆಯ ಮನೆಯ ಸಮೀಪದಿಂದ ಅಪಹರಿಸಿದ 6 ಮಂದಿ ದುಷ್ಕರ್ಮಿಗಳು ಆಕೆಯನ್ನು ಖಾಲಿ ಮೈದಾನಕ್ಕೆ ಕರೆದುಕೊಂಡು ಅತ್ಯಾಚಾರ ಎಸಗಿದ್ದಾರೆ. ಈ ವೇಳೆ ಬಾಲಕಿ ಪ್ರಜ್ಞೆ ತಪ್ಪಿದ್ದಾಳೆ. ಆಕೆಗೆ ಪ್ರಜ್ಞೆ ಬಂದಾಗ ತಾನು ರೈಲಿನಲ್ಲಿರುವುದು ತಿಳಿದಿದೆ. ಅಷ್ಟರಲ್ಲಿ ಪಕ್ಕದಲ್ಲಿದ್ದ ಇಬ್ಬರು ಚಲಿಸುತ್ತಿದ್ದ ರೈಲಿನಿಂದ ಬಾಲಕಿಯನ್ನು ಹಿಡಿದುಕೊಂಡು ಹೊರಗೆ ಎಸೆದಿದ್ದಾರೆ. ಅರೋಪಿಗಳು ಕೂದ ಅಪ್ರಾಪ್ತ ಬಾಲಕರೆಂದು ಹೇಳಲಾಗಿದ್ದು, ದುಷ್ಕರ್ಮಿಗಳ ಬಂಧನಕ್ಕಾಗಿ ಪೊಲೀಸರು ವಿಶೇಷ ತಂಡ ರಚಿಸಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಕಲ್ಲಡ್ಕ ಪುಕ್ಕಲ : ಸಚಿವ ರೈ ರಾಜೀನಾಮೆಗೆ ಬಿಜೆಪಿ ಒತ್ತಾಯ