Select Your Language

Notifications

webdunia
webdunia
webdunia
webdunia

ಹಿಂದೂಗಳು ಜನಸಂಖ್ಯೆಯನ್ನು ಹೆಚ್ಚಿಸಿಕೊಳ್ಳಿ: ಗಿರಿರಾಜ್ ಸಿಂಗ್

Giriraj Singh
ಸಹರಾಣಾಪುರ , ಸೋಮವಾರ, 24 ಅಕ್ಟೋಬರ್ 2016 (15:49 IST)
ಧರ್ಮವನ್ನು ರಕ್ಷಿಸಿಕೊಳ್ಳಲು ಹಿಂದೂಗಳು ತಮ್ಮ ಜನಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಕರೆ ನೀಡಿದ್ದಾರೆ.
ಸಹರಾಣಾಪುರ ಜಿಲ್ಲೆಯ ದೇವ್‌ಬಾದ್‌ ಪ್ರದೇಶದಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ದೇಶದ ಜನರು ರಾಮ ಮಂದಿರ ನಿರ್ಮಾಣಕ್ಕಾಗಿ ಆಗ್ರಹಿಸುತ್ತಿದ್ದಾರೆ. ಆದರೆ ರಾಮ ಭಕ್ತರೇ ಇಲ್ಲದಿದ್ದರೆ ಮಂದಿರ ನಿರ್ಮಾಣ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. 
 
ಹಿಂದೂ ಸಮುದಾಯದವರು ತಮ್ಮ ಜನಸಂಖ್ಯೆಯನ್ನು ಏರಿಸಿಕೊಳ್ಳಬೇಕಿದೆ. ದೇಶದ 8 ರಾಜ್ಯಗಳಲ್ಲಿ ನಮ್ಮ ಜನರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿದೆ ಎಂದವರು ಕಳವಳ ವ್ಯಕ್ತ ಪಡಿಸಿದ್ದಾರೆ.
 
ವಿಭಜನೆ ಸಂದರ್ಭದಲ್ಲಿ ಪಾಕಿಸ್ತಾನದಲ್ಲಿ 22 ಪ್ರತಿಶತ ಹಿಂದೂಗಳಿದ್ದರು. ಮತ್ತೀಗ ಅದು 1 %ಕ್ಕೆ ಇಳಿದಿದೆ. ಅದೇ ಭಾರತದ ಮಟ್ಟಿಗೆ ಹೇಳುವುದಾದರೆ ಆ ಸಮಯದಲ್ಲಿ ಹಿಂದೂಗಳ ಸಂಖ್ಯೆ 90%, ಇಸ್ಲಾಂ ಧರ್ಮೀಯರ ಸಂಖ್ಯೆ 10% ಇತ್ತು. ಆದರೀಗ ಮುಸ್ಲಿಮರ ಜನಸಂಖ್ಯೆ 24% ಕ್ಕೇರಿದರೆ, ಹಿಂದೂಗಳು 76% ಕ್ಕೆ ಇಳಿಕೆಯಾಗಿದೆ ಎಂದು ಅವರು ಹೇಳಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯರಿಂದ ಅಹಿಂದ ವರ್ಗಕ್ಕೆ ಅನ್ಯಾಯ, ಹೀಗಾಗಿ ಪ್ರಸಾದ್, ಇಬ್ರಾಹಿಂ ಸಿಡಿದೆದ್ದಿದ್ದಾರೆ: ಶ್ರೀರಾಮುಲು