Select Your Language

Notifications

webdunia
webdunia
webdunia
webdunia

ಪಾಕ್ ನಿಂದ ಮರಳಿರುವ ಯುವತಿಗೆ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ರಿಂದ ಕನ್ಯಾದಾನ

ಪಾಕ್ ನಿಂದ ಮರಳಿರುವ ಯುವತಿಗೆ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ರಿಂದ ಕನ್ಯಾದಾನ
ಭೋಪಾಲ್ , ಸೋಮವಾರ, 10 ಜುಲೈ 2017 (12:59 IST)
ಭೋಪಾಲ್:ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸಲಹೆ ಮೇರೆಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಅನಾಥ ಯುವತಿಯೊಬ್ಬಳ ವಿವಾಹ ಮಾಡಿ, ಕನ್ಯಾದಾನ ನೆರವೇರಿಸಲಿದ್ದಾರೆ.
 
ಹೌದು..ಆಕಸ್ಮಿಕ ಘಟನೆಯೊಂದರಲ್ಲಿ ಬಾಲ್ಯದಲ್ಲಿ ಪಾಕಿಸ್ತಾನಕ್ಕೆ ತೆರಳಿ 13 ವರ್ಷಗಳ ಕಾಲ ಯಾತನೆ ಅನುಭವಿಸಿ 2015ರಲ್ಲಿ ಭಾರತಕ್ಕೆ ಮರಳಿದ್ದ ಅನಾಥ ಯುವತಿ ಗೀತಾ ಶೀಘ್ರದಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಸ್ವತ: ಸಿಎಂ ಚೌಹಾಣ್ ಕನ್ಯಾದಾನ ಮಾಡಲಿದ್ದಾರೆ. 
 
ವಿದಿಶಾ ಸಂಸದರಾಗಿರುವ ಸುಷ್ಮಾ, ಭೂಪಾಲ್ ಗೆ ಬಂದಾಗಲೆಲ್ಲ ಗೀತಾಳನ್ನು ಭೇಟಿಯಾಗುತ್ತಿದ್ದರು. ಹೀಗೆ ಈಬಾರಿ ಭೇಟಿಯಾದಾಗ ಮಾತನಾಡಿರುವ ಸುಷ್ಮಾ,ಗೀತಾಳಿಗೆ 25 ವರ್ಷ ತುಂಬಿದ್ದು, ಗೀತಾ ಆಯ್ಕೆಯಂತೆಯೇ ಆಕೆ ಇಷ್ಟಪಡುವಂತಹ ಸೂಕ್ತ ವರನನ್ನು ಹುಡುಕಲಾಗುವುದು.ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರೇ ಕನ್ಯಾದಾನ ಮಾಡಲಿದ್ದಾರೆಂದು ಹೇಳಿದ್ದಾರೆ.  
 

Share this Story:

Follow Webdunia kannada

ಮುಂದಿನ ಸುದ್ದಿ

ಮಂಗಳೂರಿನ ಕೊಲೆಗೆ ಸಚಿವ ರೈ, ಸಿಎಂ ಜವಾಬ್ದಾರರು: ಯಡಿಯೂರಪ್ಪ