Publish Date: Mon, 29 Nov 2021 (10:15 IST)
Updated Date: Mon, 29 Nov 2021 (10:26 IST)
ನವದೆಹಲಿ: ಮಾಜಿ ಕ್ರಿಕೆಟಿಗ, ಸಂಸದ ಗೌತಮ್ ಗಂಭೀರ್ ಗೆ ಮತ್ತೆ ಉಗ್ರ ಸಂಘಟನೆಯಿಂದ ಜೀವ ಬೆದರಿಕೆ ಈಮೇಲ್ ಬಂದಿದೆ.
ಐಸಿಸ್ ಕಾಶ್ಮೀರ ಸಂಘಟನೆಯಿಂದ ಈ ಮೊದಲು ಅವರಿಗೆ ಈಮೇಲ್ ಮುಖೇನ ಬೆದರಿಕೆ ಕರೆ ಬಂದಿತ್ತು. ಈ ಸಂಬಂಧ ಅವರು ದೆಹಲಿ ಪೊಲೀಸರಿಗೆ ದೂರು ನೀಡಿದ್ದರು.
ಪೊಲೀಸರಲ್ಲೇ ನಮಗೆ ಮಾಹಿತಿ ಕೊಡುವವರಿದ್ದಾರೆ. ನಿಮ್ಮ ದೂರಿನ ತನಿಖೆ ಯಾವ ಹಂತದಲ್ಲಿದೆ ಎನ್ನುವ ಎಲ್ಲಾ ಮಾಹಿತಿಗಳೂ ನಮಗೆ ಗೊತ್ತಾಗುತ್ತಿದೆ. ಯಾರಿಂದಲೂ ನಿಮ್ಮನ್ನು ಕಾಪಾಡಲು ಸಾಧ್ಯವಿಲ್ಲ ಎಂದು ಬೆದರಿಕೆ ಮೇಲ್ ನಲ್ಲಿ ಹೇಳಲಾಗಿದೆ. ಉಗ್ರರ ಬೆದರಿಕೆ ಹಿನ್ನಲೆಯಲ್ಲಿ ಗಂಭೀರ್ ನಿವಾಸಕ್ಕೆ ಭದ್ರತೆ ಹೆಚ್ಚಿಸಲಾಗಿತ್ತು.