Select Your Language

Notifications

webdunia
webdunia
webdunia
webdunia

ಮಹಿಳೆಯ ಮೇಲೆ ಗ್ಯಾಂಗ್‌ರೇಪ್: 7 ಆರೋಪಿಗಳ ಬಂಧನ

ಮಹಿಳೆಯ ಮೇಲೆ ಗ್ಯಾಂಗ್‌ರೇಪ್: 7 ಆರೋಪಿಗಳ ಬಂಧನ
uttarakhand , ಬುಧವಾರ, 6 ಡಿಸೆಂಬರ್ 2023 (16:25 IST)
ಪಶ್ಚಿಮ ಬಂಗಾಳ ರಾಜ್ಯದ ಮಾಲ್ಡಾದ ಕೋಟ್ವಾಲಿ ನಿವಾಸಿಯಾಗಿರುವ ಮಹಿಳೆ ತುರ್ತು ಕೆಲಸಕ್ಕಾಗಿ ತುಂಡ್ಲಾಕ್ಕೆ ಬಂದಿದ್ದಳು. ಅಲ್ಲಿ ಅಂಟೋನಿ ಅಲಿಯಾಸ್ ಸಿದ್ಧಾರ್ಥ ಎಂಬ ಪರಿಚಿತ ವ್ಯಕ್ತಿ ಆಕೆಯನ್ನು ಬಲವಂತವಾಗಿ ಹೊಟೆಲ್ ಒಂದಕ್ಕೆ ಕರೆದೊಯ್ದ.  ಅಲ್ಲಿಗೆ ಆಗಮಿಸಿದ ಇತರ 6 ಜನರ ಜತೆ ಆತ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
 
30 ವರ್ಷದ ಮಹಿಳೆಯ ಮೇಲೆ 7 ಜನರ ಗುಂಪೊಂದು ಮೈನ್ಪುರಿ ಮತ್ತು ಇತಾಹ್ ಎಂಬಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ನಂತರ ಪೀಡಿತಳನ್ನು ಇತಾಹ್‌ನಲ್ಲಿರುವ ಇನ್ನೊಂದು ಹೊಟೆಲ್‌ಗೆ ಕರೆದೊಯ್ಯಲಾಯಿತು.  ಅಲ್ಲಿ ಆ 7 ಜನ ಕಾಮುಕರು ಮತ್ತೆ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. 
 
ಕೋಟ್ವಾಲಿ ಪೊಲೀಸರ ಪ್ರಕಾರ  ಆರೋಪಿಗಳ ಕಪಿಮುಷ್ಠಿಯಿಂದ ಹೇಗೋ ತಪ್ಪಿಸಿಕೊಂಡು ಬಂದ ಆಕೆ  ಸ್ಥಳೀಯರಿಗೆ ಈ ಕುರಿತು ಮಾಹಿತಿ ನೀಡಿದ್ದಾಳೆ. ಆರೋಪಿಗಳನ್ನು ಹಿಡಿದ ಜನರು ಅವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆಯಾಗಲು ಪಾಕಿಸ್ತಾನದಿಂದ ಬಂದ ಯುವತಿ!