Publish Date: Wed, 21 Jan 2026 (20:29 IST)
Updated Date: Wed, 21 Jan 2026 (20:39 IST)
ಬೆಂಗಳೂರು: ಸಂಪೂರ್ಣ ವಿದ್ಯುಚ್ಛಾಲಿತ ಇಂಟರ್ ಸಿಟಿ ಬಸ್ ಸೇವೆ ಫ್ರೆಶ್ ಬಸ್ ಇಂದು ಬೆಂಗಳೂರು ಮೂಲದ ತಂತ್ರಜ್ಞಾನ ಕಂಪನಿ ಎಕ್ಸ್ಪೊನೆಂಟ್ ಎನರ್ಜಿಯೊಂದಿಗೆ ಮಹತ್ತರ ಒಡಂಬಡಿಕೆ (ಎಂಒಯು)ಗೆ ಸಹಿ ಹಾಕಿದೆ. ಈ ಸಹಯೋಗವು ಭಾರತದ ವೇಗದ ಚಾರ್ಜಿಂಗ್ ನ, ದೂರ ಪ್ರಯಾಣದ ಎಲೆಕ್ಟ್ರಿಕ್ ಇಂಟರ್ ಸಿಟಿ ಬಸ್ ಪ್ಲಾಟ್ ಫಾರಂ ಅನ್ನು ಪರಿಚಯಿಸುತ್ತಿದ್ದು ಅತ್ಯಂತ ಅನುಕೂಲಕರ, ಸುಸ್ಥಿರ, ವಿಸ್ತರಿಸಬಲ್ಲ ಮತ್ತು ಭಾರತದಾದ್ಯಂತ ವಾಣಿಜ್ಯ ರೀತಿಯಲ್ಲಿ ವಿಸ್ತರಿಸಲಿದೆ.
ಈ ಸಹಯೋಗವು ಭಾರತದ ಸಾರಿಗೆ ವಲಯಕ್ಕೆ ಮಹತ್ತರ ಕ್ಷಣವಾಗಿದೆ. ಫ್ರೆಶ್ ಬಸ್ ಭಾರತದ ಮೊದಲ ಮತ್ತು ಏಕೈಕ ಇಂಟರ್ ಸಿಟಿ ಎಲೆಕ್ಟ್ರಿಕ್ ಬಸ್ ಆಪರೇಟರ್ ಆಗಿದ್ದು ದೂರ ಪ್ರಯಾಣದ ಮಾರ್ಗಗಳಿಗೆ ಶೇ.100ರಷ್ಟು ಸಂಪೂರ್ಣ ಸ್ಲೀಪರ್ ಇವಿ ಬಸ್ ಗಳನ್ನು ಅಳವಡಿಸಲು ಸಾಧ್ಯವಾಗಿದ್ದು ಅವು ಎಕ್ಸ್ಪೊನೆಂಟ್ ಎನರ್ಜಿಯ ಸೂಪರ್ ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯಗಳನ್ನು ಒಳಗೊಳ್ಳಲಿದೆ.
ಈ ಸಮಗ್ರ ಪಾಲುದಾರಿಕೆಯಲ್ಲಿ ಫ್ರೆಶ್ ಬಸ್ 250 ಎಲೆಕ್ಟ್ರಿಕ್ ಬಸ್ ಗಳನ್ನು ಸಂಚಾರಕ್ಕೆ ತರಲಿದ್ದು ಅದಕ್ಕೆ ಎಕ್ಸ್ಪೊನೆಂಟ್ ಎನರ್ಜಿಯ ವೇಗದ ಚಾರ್ಜಿಂಗ್ ಪ್ಲಾಟ್ ಫಾರಂ ಮತ್ತು 1.5 ಎಂ.ಡಬ್ಲ್ಯೂ ಚಾರ್ಜಿಂಗ್ ಮೂಲಸೌಕರ್ಯದ ಬೆಂಬಲ ಪಡೆಯಲಿದೆ. ಫ್ರೆಶ್ ಬಸ್ ಹೆಚ್ಚಿನ ಬೇಡಿಕೆಯ ಹೈದರಾಬಾದ್-ಬೆಂಗಳೂರು ಕಾರಿಡಾರ್ ನಲ್ಲಿ ಸದ್ಯದಲ್ಲೇ ವಾಣಿಜ್ಯ ಸೇವೆಗಳನ್ನು ಪ್ರಾರಂಭಿಸಲಿದ್ದು ಇದು ಅಖಿಲ ಭಾರತ ವಿಸ್ತರಣೆಯ ಮೊದಲ ಹಂತವಾಗಿದೆ.
ಸಾಂಪ್ರದಾಯಿಕವಾಗಿ ಇಂಟರ್ ಸಿಟಿ ಎಲೆಕ್ಟ್ರಿಕ್ ಬಸ್ ಗಳು 50 ಕಿ.ಮೀ. ಶ್ರೇಣಿಗೆ ಸೀಮಿತವಾಗಿರುತ್ತವೆ, ಇದಲ್ಲದೆ ಹೆಚ್ಚಿನ ಚಾರ್ಜಿಂಗ್ ಸಮಯ ತೆಗೆದುಕೊಳ್ಳುತ್ತವೆ. ಫ್ರೆಶ್ ಬಸ್, ಎಕ್ಸ್ಪೊನೆಂಟ್ ಎನರ್ಜಿ ಸಹಯೋಗದಲ್ಲಿ 15 ನಿಮಿಷಗಳ ವೇಗದ ಚಾರ್ಜಿಂಗ್ ಮೂಲಕ ಇವಿ ಬಸ್ ಗಳು ಹೆಚ್ಚಿನ ಶ್ರೇಣಿ ಸಂಚರಿಸುವ ಸಮಗ್ರ ಇಕೊಸಿಸ್ಟಂ ಅನ್ನು ಸಹ-ವಿನ್ಯಾಸಗೊಳಿಸಿದೆ.
ಫ್ರೆಶ್ ಬಸ್ ಸಂಸ್ಥಾಪಕ ಮತ್ತು ಸಿಇಒ ಸುಧಾಕರ್ ಚಿರ್ರಾ, “ಇದು ನೈಜ-ವಿಶ್ವದ ಇಂಟರ್ ಸಿಟಿ ಕಾರ್ಯಾಚರಣಗಳಿಗೆ ನಿರ್ಮಾಣವಾದ ವ್ಯವಸ್ಥೆಗಳ ಮಟ್ಟದ ಪರಿಹಾರವಾಗಿದೆ. ಫಾಸ್ಟ್ ಚಾರ್ಜಿಂಗ್ ಅತಿಯಾದ ಗಾತ್ರದ ಬ್ಯಾಟರಿಗಳಿಗಿಂತ ಹೆಚ್ಚಿನ ದಕ್ಷತೆಯದಾಗಿದೆ. ಎರಡು ವರ್ಷಗಳ ಸಹಯೋಗ ಮತ್ತು ಎಕ್ಸ್ಪೊನೆಂಟ್ ಎನರ್ಜಿಯ ಕಠಿಣ ಜಂಟಿ ಎಂಜಿನಿಯರಿಂಗ್ ನಿಂದ ನಾವು ವಿಸ್ತರಿಸಲು ಸಜ್ಜಾಗಿದ್ದೇವೆ. ನಾವು ಇಂಟರ್ ಸಿಟಿ ಪ್ರಯಾಣವನ್ನು ವೇಗದ, ಹೆಚ್ಚು ವಿಶ್ವಾಸಾರ್ಹ ಮತ್ತು ಪ್ರಯಾಣಿಕ- ಕೇಂದ್ರಿತವಾಗಿಸುವ ಹೊಸ ಮಾದರಿಯನ್ನು ಸಹ-ಸೃಷ್ಟಿಸಿದ್ದೇವೆ” ಎಂದರು.