ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಹಿಮಪಾತವಾಗಿದ್ದು ಐವರು ಸೈನಿಕರು ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಕುಪ್ವಾರಾ ಜಿಲ್ಲೆಯಲ್ಲಿ ಈ ಅವಘಡ ನಡೆದಿದ್ದು, ಮಾಹಿತಿ ದೊರೆತ ತಕ್ಷಣ ಅಪಾಯವನ್ನು ಲೆಕ್ಕಿಸದೇ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ.
ಗಡಿ ನಿಯಂತ್ರಣ ರೇಖೆಯ ಬಂಡಿಪೋರಾ ಜಿಲ್ಲೆಯ ಗುರೇಜ್ ಹಾಗೂ ಸೋನ್‌ಮಾರ್ಗ್ ಸೆಕ್ಟರ್‌ಗಳಲ್ಲಿರುವ ಸೇನಾ ಶಿಬಿರಗಳ ಮೇಲೆ ಜನವರಿ 25 ರಂದು ಸಂಭವಿಸಿದ ಹಿಮಪಾತದಲ್ಲಿ 16 ಸೈನಿಕರು ಸೇರಿದಂತೆ ಒಟ್ಟು 21 ಜನರು ಅಸುನೀಗಿದ್ದರು.
ರಾಜ್ಯದ ಕುಪ್ವಾರ, ಬಂಡಿಪೋರ, ಬಾರಾಮುಲ್ಲಾ, ಗಂದೇರ್ಬಾಲ್, ಕುಲ್ಗಾಂ, ಕಾರ್ಗಿಲ್ ಜಿಲ್ಲೆ ಸೇರಿದಂತೆ ಹಲವೆಡೆಮುಂದಿನ 24 ಗಂಟೆಯೊಳಗೆ ಭಾರೀ ಪ್ರಮಾಣದ ಹಿಮಪಾತವಾಗಲಿದೆ ಎಂದು ಇಂದು ಬೆಳಿಗ್ಗೆಯಷ್ಟೇ ಹಿಮಪಾತ ಮತ್ತು ಹಿಮಕುಸಿತ ಅಧ್ಯಯನ ಸಂಸ್ಥೆ ಎಚ್ಚರಿಕೆ ನೀಡಿತ್ತು. ಈ ಎಚ್ಚರಿಕೆ ಬೆನ್ನಲ್ಲೇ ಹಿಮಪಾತ ಸಂಭವಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ