Webdunia - Bharat's app for daily news and videos

Install App

ನಾಲ್ಕು ವರ್ಷದ ಮಗುವಿನ ಹತ್ಯೆ ಪ್ರಕರಣ: ಆರೋಪಿ ತಾಯಿ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆ

Sampriya
ಬುಧವಾರ, 3 ಏಪ್ರಿಲ್ 2024 (16:45 IST)
Photo Courtesy X
ಗೋವಾ: ತಾನು ಹೆತ್ತ ಮಗುವನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ  ಗೋವಾ ಪೊಲೀಸರು ಬೆಂಗಳೂರು ಮೂಲದ ಆರೋಪಿ ಸುಚನಾ ಸೇಠ್‌ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ.

ಜನವರಿ 6ರಂದು ಗೋವಾದ ಹೋಟೆಲ್ ಒಂದರಲ್ಲಿ ತಮ್ಮ ನಾಲ್ಕು ವರ್ಷದ ಮಗು ಚಿನ್ಮಯ್‌ನನ್ನು ಹತ್ಯೆ ಮಾಡಿದ ಆರೋಪವನ್ನು ಮೈಂಡ್‌ಫುಲ್‌ ಎ.ಐ ಲ್ಯಾಬ್‌ ಹೆಸರಿನ ಸ್ಟಾರ್ಟ್‌ಅಪ್ ಕಂಪನಿಯ ಸಿಇಒ 39 ವರ್ಷದ ಸುಚನಾ ಸೇಠ್‌ ಎದುರಿಸುತ್ತಿದ್ದಾರೆ. ತನಿಖೆ ಪೂರ್ಣಗೊಂಡಿದ್ದು ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆ ಪಿಟಿಐಗೆ ಮಾಹಿತಿ ನೀಡಿದ್ದಾರೆ.

ಬಾಲಕನ ಅಂತ್ಯಕ್ರಿಯೆ ಅವರ ತಂದೆ ವೆಂಕಟರಮಣ್‌ ಅವರ ಸಮ್ಮುಖದಲ್ಲಿ ಬೆಂಗಳೂರಿನ ಹರಿಶ್ಚಂದ್ರ ಘಾಟ್‌ನಲ್ಲಿ ಜನವರಿ 10ರಂದು ನಡೆದಿತ್ತು. ಸುಚನಾ ಸೇಠ್‌ ಹಾಗೂ ಅವರ ಗಂಡ ವೆಂಕಟರಮಣ್‌ ನಡುವೆ ಕೌಟುಂಬಿಕ ಕಲಹ ಇತ್ತು  

ಘಟನೆಯ ದಿನ ರಾತ್ರಿ, ಹತ್ಯೆ ಮಾಡುವುದಕ್ಕೂ ಮುನ್ನ ಮಗುವಿಗೆ ಕೆಮ್ಮಿನ ಸಿರಪ್ ನೀಡಲಾಗಿತ್ತು. ಬಳಿಕ ಕತ್ತು ಹಿಸುಕಿ ಉಸಿರುಗಟ್ಟಿಸಿ ಸಾಯಿಸಲಾಗಿದೆ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. 59 ಸಾಕ್ಷಿಗಳನ್ನು ಪರಿಗಣಿಸಲಾಗಿದ್ದು ಜೂನ್ 14 ರಂದು ಕೋರ್ಟ್‌ನಲ್ಲಿ ವಿಚಾರಣೆ ಪ್ರಾರಂಭವಾಗಲಿದೆ.

ಆರೋಪಿಯ ನಾಲ್ಕು ವರ್ಷದ ಮಗ ಚಿನ್ಮಯ್‌ನನ್ನು ಕೊಲೆ ಮಾಡಿ ಮೃತದೇಹವನ್ನು ಸೂಟ್‌ಕೇಸ್‌ಗೆ ತುಂಬಿ ಕಾರಿನಲ್ಲಿ ಗೋವಾದಿಂದ ಬೆಂಗಳೂರಿನತ್ತ ಸಾಗಿಸುತ್ತಿದ್ದ ವೇಳೆ ಗೋವಾ ಪೊಲೀಸರ ಸೂಚನೆಯ ಮೇರೆಗೆ ಚಿತ್ರದುರ್ಗದ ಐಮಂಗಲ ಠಾಣೆಯ ಪೊಲೀಸರು ಬಂಧಿಸಿದ್ದರು. ಸದ್ಯ ಸುಚನಾ ಸೇಠ್‌ ನ್ಯಾಯಾಂಗ ಬಂಧನದಲ್ಲಿದ್ದಾರೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

India Pakistan: ನಮ್ಮ ದೇಶದಲ್ಲಿನ್ನು ಪಾಕಿಸ್ತಾನ ಧ್ವಜ, ಸರಕು ಮಾರಾಟ ಮಾಡುವಂತಿಲ್ಲ

ಸೋಫಿಯಾ ಖುರೇಷಿ ವಿರುದ್ಧ ನಾಲಗೆ ಹರಿಬಿಟ್ಟ ಸಚಿವ ವಿಜಯ್ ಶಾಗೆ ಕ್ಲಾಸ್‌ ತೆಗೆದುಕೊಂಡ ಸುಪ್ರೀಂಕೋರ್ಟ್‌

ಪಾಕ್‌ನಲ್ಲಿ ಜಲಕ್ಷಾಮದ ಭೀತಿ: ಸಿಂಧೂ ಜಲಒಪ್ಪಂದ ಅಮಾನತು ಮರು ಪರಿಶೀಲನೆಗೆ ಗೋಗರೆಯುತ್ತಿರುವ ಪಾಕ್‌

ಯುದ್ಧದ ಕ್ರೆಡಿಟ್ ದೇಶದ ಎಲ್ಲಾ ಸೈನಿಕರಿಗೆ ಹೋಗಲಿ, ಮೋದಿಗೆ ಯಾಕೆ: ಸಂತೋಷ್ ಲಾಡ್

ಮುಸ್ಲಿಮರು ಬಹುಪತ್ನಿಯರನ್ನು ಹೊಂದಬಹುದು: ಅಲಹಾಬಾದ್ ಕೋರ್ಟ್ ತೀರ್ಪು

ಮುಂದಿನ ಸುದ್ದಿ
Show comments