Select Your Language

Notifications

webdunia
webdunia
webdunia
webdunia

ಸಾಕ್ಷಿ ಮಹಾರಾಜ್‌ಗೆ ಸಂಕಷ್ಟ

ಸಾಕ್ಷಿ ಮಹಾರಾಜ್‌ಗೆ ಸಂಕಷ್ಟ
ನವದೆಹಲಿ , ಮಂಗಳವಾರ, 10 ಜನವರಿ 2017 (15:23 IST)
ಸದಾ ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿಯಾಗುವ ಸಾಕ್ಷಿ ಮಹಾರಾಜ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ವಾರ ಮೀರತ್‌ನಲ್ಲಿ ಅವರು ನೀಡಿದ್ದ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಚುನಾವಣಾ ಆಯೋಗ ಧಾರ್ಮಿಕ ಭಾವನೆಗೆ ಪ್ರಚೋದನೆ ಮತ್ತು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಡಿ ನೋಟಿಸ್ ಜಾರಿ ಮಾಡಿದೆ. ಬುಧವಾರ ಮುಂಜಾನೆ 11 ಗಂಟೆಯೊಳಗೆ ನೋಟಿಸ್‌ಗೆ ಉತ್ತರ ನೀಡುವಂತೆ ಚುನಾವಣಾ ಆಯೋಗ ತಿಳಿಸಿದೆ. 
ಭಾರತದಲ್ಲಿ ಜನಸಂಖ್ಯೆ ಹೆಚ್ಚಲು ಹಿಂದೂಗಳು ಕಾರಣರಲ್ಲ. 4 ಪತ್ನಿ 40 ಮಕ್ಕಳನ್ನು ಹೊಂದಿರುವವರೇ ಇದಕ್ಕೆ ನೇರ ಕಾರಣ ಎಂದು ಮುಸ್ಲಿಂ ಸಮುದಾಯವನ್ನು ಗುರಿಯಾಗಿರಿಸಿಕೊಂಡು ಬಿಜೆಪಿ ಸಂಸದ ಹೇಳಿಕೆ ನೀಡಿದ್ದರು. ಜತೆಗೆ  ಭಾರತದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೆ ತರಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು. ಸಾಕ್ಷಿ ಮಹಾರಾಜ್ ಹೇಳಿಕೆಗೆ ಬಿಜೆಪಿ ಅಂತರ ಕಾಯ್ದುಕೊಂಡಿತ್ತು.
 
ಈ ವಿವಾದಾತ್ಮಕ ಹೇಳಿಕೆಗಾಗಿ ಸಾಕ್ಷಿ ಮಹಾರಾಜ್ ವಿರುದ್ಧ ಮೀರತ್‌ನಲ್ಲಿ ಐಪಿಸಿ ವಿಭಾಗ 298 ಮತ್ತು ಇತರ ವಿಭಾಗಗಳಡಿ ಎಫ್ಐಆರ್ ಕೂಡ ದಾಖಲಾಗಿತ್ತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಿಎಸ್ಎಫ್ ಯೋಧನ ವಿಡಿಯೋ ಆರೋಪ; ತನಿಖೆಗೆ ಆದೇಶ