Select Your Language

Notifications

webdunia
webdunia
webdunia
webdunia

Exit Poll result: ನಾಲ್ಕು ರಾಜ್ಯಗಳ ಚುನಾವಣೆ ಎಕ್ಸಿಟ್ ಪೋಲ್ ಫಲಿತಾಂಶ ಏನು ಹೇಳುತ್ತದೆ

Four state election Exit Poll result
ಇತ್ತೀಚೆಗೆ ನಡೆದ ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶದ ಬಗ್ಗೆ ಇಡೀ ದೇಶವೇ ಕುತೂಹಲದಿಂದ ಕಾಯುತ್ತಿದೆ. ಪಶ್ಚಿಮ ಬಂಗಾಲ, ತಮಿಳುನಾಡು, ಕೇರಳ ಮತ್ತು ಅಸ್ಸಾಂ ರಾಜ್ಯಗಳ ಎಕ್ಸಿಟ್ ಪೋಲ್ ಫಲಿತಾಂಶ ಏನಾಗಬಹುದು ನೋಡಿ.
 

ದೇವರ ನಾಡು ಕೇರಳ ಯಾರ ಮುಡಿಗೆ

ದೇವರ ನಾಡು ಎಂದೇ ಖ್ಯಾತಿ ಪಡೆದಿರುವ ಕೇರಳದಲ್ಲಿ ಈ ಬಾರಿ ಆಡಳಿತಾರೂಢ ಎಲ್ ಡಿಎಫ್, ವಿಪಕ್ಷ ಯುಡಿಎಫ್ ಜೊತೆಗೆ ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ಕೂಡಾ ಟಫ್ ಫೈಟ್ ನೀಡಿದೆ. ಈ ಬಾರಿ ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಅಧಿಕಾರ ಸಿಗುವ ಸಾಧ್ಯತೆ ಬಹುತೇಕ ನಿಚ್ಚಳವಾಗಿದೆ. ಕಳೆದ ಲೋಕಸಭೆ ಚುನಾವಣೆಯಲ್ಲೂ ಎಲ್ ಡಿಎಫ್ ಗೆ ಭಾರೀ ಹಿನ್ನಡೆಯಾಗಿತ್ತು. ಕೇರಳದಿಂದ ಯುಡಿಎಫ್ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿತ್ತು. ಇನ್ನೊಂದೆಡೆ ತಿರುವನಂತಪುರಂ ಮತ್ತು ಕಾಸರಗೋಡಿನಲ್ಲಿ ಒಂದು ಕ್ಷೇತ್ರ ಬಿಜೆಪಿ ಪಾಲಾಗಬಹುದು ಎಂಬ ನಿರೀಕ್ಷೆಯಿದೆ.

ಒಟ್ಟ ಮತದಾನ ಪ್ರಮಾಣ: ಶೇ.78
ಒಟ್ಟು ವಿಧಾನಸಭೆ ಕ್ಷೇತ್ರಗಳು: 140
ಬಹುಮತ ಯಾರಿಗೆ: ಯುಡಿಎಫ್ ಗೆ ಬಹುಮತ ಸಾಧ್ಯತೆ, ಗೆಲ್ಲಬಹುದಾದ ಸ್ಥಾನಗಳು 100 ಕ್ಕೂ ಹೆಚ್ಚು ಎಂದು ಅಂದಾಜಿಸಲಾಗಿದೆ.
ಮತ ಎಣಿಕೆ: ಮೇ 4
 

ಅಸ್ಸಾಂನಲ್ಲಿ ಮತ್ತೆ ಬಿಜೆಪಿ?

ಅಸ್ಸಾಂ ಈ ಬಾರಿ ಹೆಚ್ಚು ಕುತೂಹಲ ಕೆರಳಿಸಿದ ಕ್ಷೇತ್ರ. ಇಲ್ಲಿ ಆಡಳಿತಾರೂಢ ಬಿಜೆಪಿ ಮತ್ತೆ ಅಧಿಕಾರಕ್ಕೇರುವ ಸಾಧ್ಯತೆ ಹೆಚ್ಚಿದೆ. ಕಾಂಗ್ರೆಸ್ ಪ್ರಿಯಾಂಕ್ ಖರ್ಗೆ, ಕರ್ನಾಟಕದ ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಪ್ರಚಾರ ನಡೆಸಿದರೂ ಇಲ್ಲಿ ಸಿಎಂ ಹಿಮಂತ ಬಿಸ್ವಾ ಶರ್ಮಾ ವರ್ಚಸ್ಸು ಬಿಜೆಪಿ ಕೈ ಹಿಡಿಯಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ. ಜೊತೆಗೆ ಅಲ್ಪಸಂಖ್ಯಾತರ ಮತಗಳು ಸ್ವಲ್ಪ ಪ್ರಮಾಣದಲ್ಲಿ ಎಐಯುಡಿಎಫ್ ಪಾಲಾಗುವ ಸಾಧ್ಯತೆಯಿದೆ. ಹಾಗಿದ್ದರೂ ಅತಂತ್ರ ಸ್ಥಿತಿ ಬಂದರೆ ಈ ಪಕ್ಷ ಕಿಂಗ್ ಮೇಕರ್ ಆದರೂ ಅಚ್ಚರಿಯಿಲ್ಲ.

ಒಟ್ಟು ವಿಧಾನಸಭೆ ಕ್ಷೇತ್ರ: 126
ಮತದಾನ ಪ್ರಮಾಣ: ದಾಖಲೆಯ ಶೇ.85
ಪ್ರಮುಖ ಪೈಪೋಟಿ: ಇಂಡಿ ಒಕ್ಕೂಟ ಮತ್ತು ಎನ್ ಡಿಎ
ಫಲಿತಾಂಶ ಪ್ರಕಟ: ಮೇ 4

ಪಶ್ಚಿಮ ಬಂಗಾಲ: ಈ ಬಾರಿ ಅತೀ ಹೆಚ್ಚು ಕುತೂಹಲದಿಂದ ದೇಶವೇ ಎದಿರು ನೋಡುತ್ತಿರುವ ಚುನಾವಣೆ ಎಂದರೆ ಪಶ್ಚಿಮ ಬಂಗಾಲದಲ್ಲಿ ಈ ಬಾರಿ ಬಿಜೆಪಿ ಅಧಿಕಾರ ಹಿಡಿಯುವ ಯತ್ನದಲ್ಲಿದೆ. ಒಂದು ವೇಳೆ ಬಿಜೆಪಿ ಇಲ್ಲಿ ಗೆದ್ದರೆ ಅದು ಐತಿಹಾಸಿಕ ಗೆಲುವಾಗಲಿದೆ. ಆದರೆ ಪಶ್ಚಿಮ ಬಂಗಾಲದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸೋಲಿಸುವುದು ಅಷ್ಟು ಸುಲಭವಲ್ಲ. ಆದರೆ ಈ ಬಾರಿ ಇಲ್ಲಿ ಮತಪಟ್ಟಿ ಪರಿಷ್ಕರಣೆ, ಸಿಆರ್ ಪಿಎಫ್ ಯೋಧರಿಂದ ಬಿಗಿ ಭದ್ರತೆ ನಡುವೆ ನಡೆದ ಚುನಾವಣೆ, ಮಮತಾ ಆಡಳಿತದಲ್ಲಿ ಹಿಂದೂಗಳ ಮೇಲೆ ನಡೆದಿದ್ದ ಹಿಂಸಾಚಾರಗಳು ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು ಎನ್ನಲಾಗಿದೆ. ಇಲ್ಲಿ ಬಿಜೆಪಿ ಮತ್ತು ಟಿಎಂಸಿ ನಡುವೆ ಈ ಬಾರಿ ನೇರ ಹಣಾಹಣಿಯಿದೆ. ಕಾಂಗ್ರೆಸ್ ಸ್ಪರ್ಧೆಯಲ್ಲಿದ್ದರೂ ಏಕಾಂಗಿಯಾಗಿ ಸ್ಪರ್ಧಿಸುತ್ತಿರುವ ಅದಕ್ಕೆ ಅಷ್ಟು ಶಕ್ತಿಯಿಲ್ಲ.

ಒಟ್ಟು ವಿಧಾನಸಭೆ ಕ್ಷೇತ್ರಗಳು: 294
ಮತ ಪ್ರಮಾಣ: ಶೇ.93.19
ನೇರ ಹಣಾಹಣಿ: ಟಿಎಂಸಿ ಮತ್ತು ಬಿಜೆಪಿ
ಫಲಿತಾಂಶ ಪ್ರಕಟ: ಮೇ 4
 

ತಮಿಳುನಾಡಿನಲ್ಲಿ ಕಿಂಗ್ ಮೇಕರ್ ಆಗ್ತಾರಾ ವಿಜಯ್

ತಮಿಳುನಾಡು ಚುನಾವಣೆ ಫಲಿತಾಂಶ ಈ ಬಾರಿ ತೀವ್ರ ಕುತೂಹಲ ಕೆರಳಿಸಿದೆ. ಹೊಸದಾಗಿ ಪಕ್ಷ ಸ್ಥಾಪಿಸಿ ಸ್ಪರ್ಧಿಸಿರುವ ದಳಪತಿ ವಿಜಯ್ ಅವರ ಟಿವಿಕೆ ಕಿಂಗ್ ಮೇಕರ್ ಆಗುವ ವಿಶ್ವಾಸದಲ್ಲಿದೆ. ಇಲ್ಲಿ ಡಿಎಂಕೆ, ಎಐಡಿಎಂಕೆ ಮತ್ತು ಟಿವಿಕೆ ನಡುವೆ ಹಣಾಹಣಿಯಿದೆ. ಬಿಜೆಪಿ ಇಲ್ಲಿ ಮಿತ್ರ ಪಕ್ಷ ಎಐಡಿಎಂಕೆ ಜೊತೆ ಸರ್ಕಾರ ರಚಿಸುವ ಸರ್ಕಸ್ ಮಾಡುತ್ತಿದೆಯಾದರೂ ಅದು ಅಷ್ಟು ಸುಲಭವಲ್ಲ. ಡಿಎಂಕೆ ನಾಯಕತ್ವದ ವರ್ಚಸ್ಸು ತಮಿಳುನಾಡಿನಲ್ಲಿ ಪಕ್ಷದ ಕೈ ಹಿಡಿಯಬಹುದು. ಆದರೆ ದಳಪತಿ ವಿಜಯ್ ತಮ್ಮ ಸಿನಿಮಾ ಜನಪ್ರಿಯತೆ ಜೊತೆಗೆ ಈ ಬಾರಿ ಸಾಕಷ್ಟು ರೋಡ್ ಶೋ, ಪಾದಯಾತ್ರೆಗಳ ಮೂಲಕ ಜನರ ಗಮನ ಸೆಳೆದಿದ್ದಾರೆ. ಹೀಗಾಗಿ ಇಲ್ಲಿ ಫಲಿತಾಂಶ ಏನಾಗಬಹುದು ಎಂದು ಹೇಳಲು ಸಾಧ್ಯವಿಲ್ಲ.

ಒಟ್ಟು ಕ್ಷೇತ್ರಗಳು: 234
ಮತ ಪ್ರಮಾಣ: 85.13
ನೇರ ಹಣಾಹಣಿ: ಡಿಎಂಕೆ, ಎಐಡಿಎಂಕೆ, ಬಿಜೆಪಿ, ಟಿವಿಕೆ
ಫಲಿತಾಂಶ: ಮೇ 4


Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಕುರ್ಚಿ ಕಿತ್ತಾಟದ ನಡುವೆ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌