Select Your Language

Notifications

webdunia
webdunia
webdunia
webdunia

ಯುವತಿಯ ಅರೆನಗ್ನ ವಿಡಿಯೋವನ್ನು ಅಪ್ಲೋಡ್ ಮಾಡಿದ ಮಾಜಿ ಪ್ರಿಯತಮ

ಯುವತಿಯ ಅರೆನಗ್ನ ವಿಡಿಯೋವನ್ನು ಅಪ್ಲೋಡ್ ಮಾಡಿದ ಮಾಜಿ ಪ್ರಿಯತಮ
ಅಸ್ಸಾಂ , ಗುರುವಾರ, 13 ಸೆಪ್ಟಂಬರ್ 2018 (06:24 IST)
ಅಸ್ಸಾಂ : ಮಾಜಿ ಪ್ರಿಯತಮ ತನ್ನ ಅರೆನಗ್ನ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಕ್ಕೆ ಯುವತಿಯೊಬ್ಬಳಿಗೆ ಗ್ರಾಮಸ್ಥರು ದಂಡ ವಿಧಿಸಿರುವ ಘಟನೆ ಅಸ್ಸಾಂನ ಗುವಾಹಟಿಯಲ್ಲಿ ನಡೆದಿದೆ.


ಯುವತಿ, ಸಂಗ್ಮಾ ಎಂಬ ವ್ಯಕ್ತಿಯನ್ನು ಪ್ರೀತಿಸುತ್ತಿದ್ದ ವೇಳೆ ಆತನ ಜೊತೆ ಕಳೆದ ಏಕಾಂತ ಕ್ಷಣಗಳನ್ನು ಆತ ಆಕೆಯ ತಿಳಿಯದಂತೆ ವಿಡಿಯೋ ಮಾಡಿದ್ದಾನೆ. ಇದೀಗ ಅವರ ಸಂಬಂಧ ಮುರಿದು ಬಿದ್ದ ಮೇಲೆ ಆಕೆಯ ಮೇಲಿನ ದ್ವೇಷಕ್ಕೆ ಆಕೆಯ ಅರೆ ನಗ್ನ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿದ್ದಾನೆ.


ಈ ಬಗ್ಗೆ ಯುವತಿ ಮೆಂಡಿಪತರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ಮಾನ್ಸ್ ರಂಗ್ ಸಂಗ್ಮಾನನ್ನು ಬಂಧಿಸಿದ್ದಾರೆ. ಆದರೆ ಯುವತಿಯ ಗ್ರಾಮದ ಮುಖಂಡರು ಈಕೆ ಪಾಪ ಮಾಡಿದ್ದಾಳೆ ಎಂದು 3000 ರೂ. ದಂಡ ವಿಧಿಸಿದ್ದಾರೆ. ಬಳಿಕ ಅಲ್ಲಿನ ಸಮುದಾಯವದರು ಮತ್ತೊಮ್ಮೆ ಸಭೆ ನಡೆಸಿ 3000 ರೂ. ದಂಡದ ಹಣವನ್ನು 1,500 ರೂ.ಗೆ ಕಡಿಮೆ ಮಾಡಿದ್ದಾರೆ. ಸದ್ಯಕ್ಕೆ ಸಿವಿಲ್ ಸೊಸೈಟಿ ಮಹಿಳಾ ಸಂಸ್ಥೆ ಯುವತಿಯನ್ನು ರಕ್ಷಣೆ ಮುಂದಾಗಿದ್ದು, ಆಕೆಗೆ ನ್ಯಾಯ ಕೊಡಿಸಿವುದಾಗಿ ಭರವಸೆ ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಚಾಕು ತೋರಿಸಿ ಮಾಜಿ ಪ್ರೇಯಸಿಯ ಮೇಲೆ ಅತ್ಯಾಚಾರ ಎಸಗಿದ ಯುವಕ