Select Your Language

Notifications

webdunia
webdunia
webdunia
webdunia

5ನೇ ಪ್ರಕರಣದಲ್ಲೂ ಲಾಲೂ ಪ್ರಸಾದ್‌ ಗೆ ಜಾಮೀನು ಮಂಜೂರು

Fodder scam Lalu Prasad bail ಜಾಮೀನು ಮೇವು ಹಗರಣ ಲಾಲೂ ಪ್ರಸಾದ್‌ ಯಾದವ್
benga;luru , ಶುಕ್ರವಾರ, 22 ಏಪ್ರಿಲ್ 2022 (16:14 IST)
ಬಿಹಾರ ಮಾಜಿ ಸಿಎಂ ಹಾಗೂ ಮಾಜಿ ಕೇಂದ್ರ ಸಚಿವ ಲಾಲೂ ಪ್ರಸಾದ್‌ ಯಾದವ್‌ ಗೆ ಮೇವು ಹಗರಣಕ್ಕೆ ಸಂಬಂಧಿಸಿದ 5ನೇ ಪ್ರಕರಣದಲ್ಲೂ ಜಾಮೀನು ಮಂಜೂರಾಗಿದೆ.
ದೊರಂಡಾ ಖಜಾಂಜಿ ಪ್ರಕರಣದಲ್ಲಿ ಲಾಲೂ ಪ್ರಸಾದ್‌ ಯಾದವ್‌ ಗೆ ಜಾರ್ಖಂಡ್‌ ನ್ಯಾಯಾಲಯ ಜಾಮೀನು ನೀಡಿದೆ.
ಸುಮಾರು 135 ಕೋಟಿ ರೂ. ಮೌಲ್ಯದ ಮೇವು ಹಗರಣದಲ್ಲಿ ಇತ್ತೀಚೆಗೆ ರಾಂಚಿಯ ಸಿಬಿಐ ವಿಶೇಷ ನ್ಯಾಯಾಲಯ ತಪ್ಪಿತಸ್ಥ ಎಂದು ಉಲ್ಲೇಖಿಸಿದ್ದು, ಜಾಮೀನು ರದ್ದು ಮಾಡಿ ಶರಣಾಗುವಂತೆ ಸೂಚಿಸಿತ್ತು.
ಲಾಲೂ ಪ್ರಸಾದ್‌ ಯಾದವ್‌ ಗೆ ಈಗಾಗಲೇ 30 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದ್ದು, ಪ್ರಕರಣದಲ್ಲಿ ಈಗಾಗಲೇ 5 ವರ್ಷ ಜೈಲು ಶಿಕ್ಷೆ ಅನುಭಸಿದ್ದಾರೆ. ಆದ್ದರಿಂದ ಜಾಮೀನು ಮಂಜೂರು ಮಾಡಬೇಕು ಎಂದು ಲಾಲೂ ಪರ ವಕೀಲರ ವಾದಕ್ಕೆ ನ್ಯಾಯಾಲಯ ಅಸ್ತು ಎಂದು ಹೇಳಿತು.

Share this Story:

Follow Webdunia kannada

ಮುಂದಿನ ಸುದ್ದಿ

ಹಿಜಾಬ್‌ ವಿವಾದ: ಪಿಯುಸಿ ಪರೀಕ್ಷೆಯಿಂದ ಹೊರನಡೆದ ಇಬ್ಬರು ವಿದ್ಯಾರ್ಥಿನಿಯರು!