ನವದೆಹಲಿ : ಕೊರೊನಾ ರೂಪಾಂತರವಾದ ಓಮಿಕ್ರಾನ್ ಭಯದಿಂದ ಭಾರತ ಅಂತರರಾಷ್ಟ್ರೀಯ ವಿಮಾನಗಳ ಪುನರಾರಂಭ ಮುಂದೂಡಲಾಗಿದೆ.
ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ಹೊರಡಿಸಿದ ಸೂಚನೆಯ ಪ್ರಕಾರ, ಕೇಂದ್ರ ಸರ್ಕಾರವು ಪ್ರಸ್ತುತ ಜಾಗತಿಕ ಕೊರೊನಾವೈರಸ್ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ.
ವಿಶೇಷವಾಗಿ ಕೊರೊನಾ ಹೊಸ ರೂಪಾಂತರ ಓಮಿಕ್ರಾನ್ ಹರಡುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಜಾಗತಿಕ ಸನ್ನಿವೇಶದ ದೃಷ್ಟಿಯಿಂದ, ಎಲ್ಲರೊಂದಿಗೆ ಸಮಾಲೋಚಿಸಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಅಂತರರಾಷ್ಟ್ರೀಯ ವಿಮಾನವನ್ನು ಪುನರಾರಂಭ ಮಾಡಲು ದಿನಾಂಕವನ್ನು ಸೂಚಿಸಲು ಇನ್ನೂ ಸಮಯ ಬೇಕು. ಇದಕ್ಕೆ ಸೂಕ್ತ ನಿರ್ಧಾರವನ್ನು ಶೀಘ್ರದಲ್ಲೇ ತೆಗೆದುಕೊಂಡು ತಿಳಿಸಲಾಗುವುದು ಎಂದು ಡಿಜಿಸಿಎ ಟ್ವೀಟ್ ಮಾಡಿದೆ.