Select Your Language

Notifications

webdunia
webdunia
webdunia
webdunia

ಟೇಕಾಫ್ ಆದ ಕೂಡಲೇ ವಿಮಾನದ ರೆಕ್ಕೆಗೆ ಹೊತ್ತಿಕೊಂಡ ಬೆಂಕಿ

ಟೇಕಾಫ್ ಆದ ಕೂಡಲೇ ವಿಮಾನದ ರೆಕ್ಕೆಗೆ ಹೊತ್ತಿಕೊಂಡ ಬೆಂಕಿ
new delhi , ಶುಕ್ರವಾರ, 10 ಫೆಬ್ರವರಿ 2017 (12:55 IST)
ಟೇಕಾಫ್ ಆದ ಕೂಡಲೇ ವಿಮಾನದ ರೆಕ್ಕೆಗೆ ಬೆಂಕಿ ಹೊತ್ತಿಕೊಂಡ ಘಟನೆ ನವದೆಹಲಿಯಿಂದ ಬೆಂಗಳೂರಿನ ಕಡೆಗೆ ಹೊರಟಿದ್ದ ಗೋಏರ್ ವಿಮಾನದಲ್ಲಿ ನಡೆದಿದೆ. ಬೆಂಕಿ ಯನ್ನ ಕಂಡು ಸಿಬ್ಬಂದಿ ಮತ್ತು ಪ್ರಯಾಣಿಕರು ಕೂಗಿಕೊಂಡಿದ್ದಾರೆ. ಧೃತಿಗೆಡದ ಪೈಲಟ್ ನಿಧಾನವಾಗಿ ವಿಮಾನವನ್ನ ಮತ್ತೆ ಲ್ಯಾಂಡಿಂಗ್ ಮಾಡಿದ್ದಾನೆ.


ವಿಮಾನ ಲ್ಯಾಂಡ್ ಆಗುತ್ತಲೇ ಎಲ್ಲ ಪ್ರಯಾಣಿಕರನ್ನ ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ. 30 ಸೆಕೆಂಡುಗಳ ಕಾಲ ಕಾಣಿಸಿಕೊಂಡಿದ್ದ ಬೆಂಕಿ ನಿಜಕ್ಕೂ ಭಯಾನಕ ಅನುಭವ ಅಂತಾರೆ ಪ್ರಯಾಣಿಕರು.

ವಿಮಾನ ಟೇಕಾಫ್ ಆದ ಸ್ವಲ್ಪ ಸಮಯದಲ್ಲೇ ವಿಮಾನದ ಎಡಬದಿಯ ರೆಕ್ಕೆಗೆ ಬೆಂಕಿ ಹೊತ್ತಿಕೊಂಡಿತ್ತು. ಪ್ರಯಾಣಿಕರೆಲ್ಲರೂ ಚೀರತೊಡಗಿದರು. ಪೈಲಟ್ ಜಾಣತನದಲ್ಲಿ ವಿಮಾನವನ್ನ ಇಳಿಸಿ ಪ್ರಾಣ ಕಾಪಾಡಿದ ಅಂತಾರೆ ಪ್ರಯಾಣಿಕರು.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ ಬ್ರಿಗೇಡ್ ಗ್ರೂಪ್‍ನಿಂದ ಮೆಗಾ ಹೋಂ ಫೆಸ್ಟ್