Select Your Language

Notifications

webdunia
webdunia
webdunia
webdunia

ಐಟಿ ದಾಳಿ ವೇಳೆ ದಾಖಲೆ ಹರಿಯಲು ಯತ್ನ: ಅರುಣ್ ಜೇಟ್ಲಿ

ಐಟಿ ದಾಳಿ ವೇಳೆ ದಾಖಲೆ ಹರಿಯಲು ಯತ್ನ: ಅರುಣ್ ಜೇಟ್ಲಿ
ನವದೆಹಲಿ , ಬುಧವಾರ, 2 ಆಗಸ್ಟ್ 2017 (12:39 IST)
ಈಗಲ್ ಟನ್ ರೆಸಾರ್ಟ್`ನಲ್ಲಿ ಐಟಿ ದಾಳಿ ವೇಳೆ ದಾಖಲೆಗಳನ್ನ ಹರಿಯಲು ಸಚಿವರು ಪ್ರಯತ್ನ ನಡೆಸಿದ್ದಾರೆ. ಬಳಿಕ ಹರಿದ ದಾಖಲೆಗಳನ್ನ ಮಹಜರ್ ಮಾಡಿ ವಶಕ್ಕೆ ಪಡೆಯಲಾಗಿದೆ ಎಂದು ಹಣಕಾಸು ಸಚಿವ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.  

ಐಟಿ ಅಧಿಕಾರಿಗಳನ್ನ ಬಳಸಿಕೊಂಡು ಕಾಂಗ್ರೆಸ್ ನಾಯಕರನ್ನ ಬಳಸಿಕೊಂಡು ಕಾಂಗ್ರೆಸ್ ನಾಯಕರನ್ನ ಬೆದರಿಸುವ ಯತ್ನ ನಡೆದಿದೆ. ಒಂದು ರಾಜ್ಯಸಭಾ ಸ್ಥಾನ ಗೆಲ್ಲಲು ಈ ಕೀಳುಮಟ್ಟಕ್ಕೆ ಇಳಿದಿದ್ದಾರೆ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಹಣಕಾಸು ಸಚಿವ ಅರುಣ್ ಜೇಟ್ಲಿ, ಐಟಿ ದಾಳಿಗೂ ಗುಜರಾತ್ ಚುನಾವಣೆಗೂ ಸಂಬಂಧವಿಲ್ಲ. ಪ್ರಕರಣಕ್ಕೆ ಸಂಬಂಧಿಸಿದ ವ್ಯಕ್ತಿ ರೆಸಾರ್ಟ್`ನಲ್ಲಿ ಇದ್ದುದರಿಂದ ದಾಳಿ ನಡೆಸಿದ್ದಾರೆ. ಇದರಲ್ಲಿ ಸರ್ಕಾರದ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದೇವೇಳೆ, ಐಟಿ ದಾಳಿ ವೇಳೆ ದಾಖಲೆ ಪತ್ರಗಳನ್ನ ಹರಿಯುವ ಯತ್ನ ನಡೆದಿದೆ.  ಮಹಜರ್ ಮಾಡಿ ಹರಿದ ದಾಖಲೆಗಳನ್ನೇ ವಶಪಡಿಸಿಕೊಳ್ಳಲಾಗಿದೆ. ಹಣಕಾಸು ಅಪರಾಧದಡಿ ಕೇಸು ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

‘ಐಟಿ ರೇಡ್ ಗೂ ಗುಜರಾತ್ ರಾಜಕಾರಣಕ್ಕೂ ಸಂಬಂಧವಿಲ್ಲ’