Select Your Language

Notifications

webdunia
webdunia
webdunia
webdunia

ಕೊನೆಗೂ ಯೋಧನ ಈ ಕಾರ್ಯಕ್ಕೆ ಸಿಕ್ಕಿತು ಸನ್ಮಾನ

ಕೊನೆಗೂ ಯೋಧನ ಈ ಕಾರ್ಯಕ್ಕೆ ಸಿಕ್ಕಿತು ಸನ್ಮಾನ
Srinangar , ಮಂಗಳವಾರ, 23 ಮೇ 2017 (08:19 IST)
ಶ್ರೀನಗರ: ಕಲ್ಲು ತೂರಾಟ ನಡೆಸಿದ ವ್ಯಕ್ತಿಯನ್ನು ಜೀಪ್ ಗೆ ಕಟ್ಟಿದ ಭಾರತೀಯ ಸೇನೆಯ ವೀರ ಯೋಧ ಲೀತುಲ್ ಗೊಗೊಯ್ ಗೆ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಉಡುಗೊರೆ ನೀಡಿ ಗೌರವಿಸಿದ್ದಾರೆ.

 
ಭದ್ರತಾ ಕಾರ್ಯದಲ್ಲಿ ನಿರತರಾಗಿದ್ದ ಗೊಗೊಯ್ ಕಲ್ಲು ತೂರಾಟ ನಡೆಸುತ್ತಿದ್ದ ಓರ್ವನನ್ನು ಜೀಪ್ ಗೆ ಕಟ್ಟಿ ಹಲವರನ್ನು ರಕ್ಷಿಸಿ ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದರು. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿತ್ತು.

ಮೈಸೂರು ಸಂಸದ ಪ್ರತಾಪ್ ಸಿಂಹ, ತಮ್ಮ ಟ್ವಿಟರ್ ಪೇಜ್ ನಲ್ಲಿ, ಗೊಗೊಯ್ ವಿರುದ್ಧವಾಗಿ ಏನಾದರೂ ಕ್ರಮ ಕೈಗೊಂಡರೆ ದೇಶಾದ್ಯಂತ ಪ್ರತಿಭಟನೆ ಅಭಿಯಾನ ಪ್ರಾರಂಭಿಸೋಣ ಎಂದು ಕರೆಕೊಟ್ಟಿದ್ದರು.

ಅಂತೂ ಸೇನೆ ಗೊಗೊಯ್ ಕ್ರಮವನ್ನು ಗುರುತಿಸಿ ಸನ್ಮಾನಿಸಿದೆ. ಅವರು ಮಾಡಿದ ಸಾಹಸದಿಂದಾಗಿ ಹಲವರ ಪ್ರಾಣ ಉಳಿದಿದೆ. ಜಮ್ಮು ಮತ್ತು  ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳು ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸುವುದು ಇತ್ತೀಚೆಗೆ ಹೆಚ್ಚಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ತಿವಾರಿ ಪ್ರಕರಣ ಸಿಬಿಐ ತನಿಖೆಗೆ : ನಮ್ಮಿಂದ ಸಂಪೂರ್ಣ ಸಹಕಾರ ಎಂದ ಸಿಎಂ