Daily Horoscope

Select Your Language

Notifications

webdunia
webdunia
webdunia
webdunia

ಹನಿಮೂನ್‌ಗೆ ತೆರಳಿದ್ದ ಮಹಿಳಾ ಟೆಕ್ಕಿ ಅನುಮಾನಸ್ಪದ ರೀತಿಯಲ್ಲಿ ಶವವಾಗಿ ಪತ್ತೆ

Uttarakhand's Mussoorie Honeymoon Techie Death
Photo Courtesy X
ಡೆಹ್ರಾಡೂನ್‌: ಹನಿಮೂನ್‌ಗೆ ತೆರಳಿದ್ದ 27ವರ್ಷದ ಮಹಿಳಾ ಟೆಕ್ಕಿಯೊಬ್ಬರು ಅನುಮಾನಸ್ಪದವಾಗಿ ಮೃತಪಟ್ಟ ಘಟನೆ  ಉತ್ತರಾಖಂಡದ ಮಸ್ಸೂರಿಯಲ್ಲಿ ವರದಿಯಾಗಿದೆ.

ಮೃತ ಟೆಕ್ಕಿಯನ್ನು ಪಿ. ರಾಧಾ ಗಾಯತ್ರಿ ಎಂದು ಗುರುತಿಸಲಾಗಿದೆ. ಅವರು ಗುರುಗ್ರಾಮದ ಖಾಸಗಿ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ದೆಹಲಿಯಲ್ಲಿ ವಾಸವಾಗಿದ್ದರು.

ರಾಧಾ ಗಾಯತ್ರಿ ತಮ್ಮ ಪತಿ ಸೌಮ್ಯ ಶ್ರೀಚರಣ್ ಅವರು ಮಸೂರಿಗೆ ಪ್ರವಾಸಕ್ಕೆ ತೆರಳಿದ್ದಾರೆ. ಶ್ರೀಚರಣ್ ಕೂಡ ಐಟಿ ಕ್ಷೇತ್ರದಲ್ಲೇ ಕೆಲಸ ಮಾಡುತ್ತಿದ್ದು, ಪುಣೆಯಲ್ಲಿ ಉದ್ಯೋಗದಲ್ಲಿದ್ದಾರೆ. ಜೂನ್ 14ರ ರಾತ್ರಿ ದಂಪತಿ ಮಸೂರಿಯ ಟಿಪ್ರಿಧಾರ್ ಪ್ರದೇಶದಲ್ಲಿರುವ ಕಿಯಾನಾ ಹೋಂಸ್ಟೇಗೆ ಆಗಮಿಸಿದ್ದರು.

‘ಬ್ಲಿಸ್’ ಎಂಬ ಕೊಠಡಿಯಲ್ಲಿ ತಂಗಿದ್ದ ದಂಪತಿ ರಾತ್ರಿ ಮದ್ಯ ಸೇವಿಸಿದ್ದಾರೆ. ಬೆಳಗ್ಗಿನ ಜಾವ ಶ್ರೀಚರಣ್ ಅವರು ಎದ್ದು ನೋಡಿದಾಗ ರಾಧಾ ಅವರು ಪ್ರತಿಕ್ರಿಯಿಸಲಿಲ್ಲ.  

ಆಂಬ್ಯುಲೆನ್ಸ್‌ನಲ್ಲಿದ್ದ ಔಷಧಿಕಾರರು ಆಕೆಯನ್ನು ಪರೀಕ್ಷಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಕೊಠಡಿಯಿಂದ ಎರಡು ಖಾಲಿ ಮದ್ಯದ ಬಾಟಲಿಗಳು ಮತ್ತು ಆಹಾರ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ವಯಂ ಘೋಷಿತ 'ಹಿಂದೂ ರಕ್ಷಕರು' ಈಗ ಏನು ಹೇಳುತ್ತಾರೆ