Select Your Language

Notifications

webdunia
webdunia
webdunia
webdunia

ಕೇರಳದ ಸಿಎಂ ಪಿಣರಾಯಿ ವಿಜಯನ್ ಗೆ ಮಾವೋವಾದಿಗಳಿಂದ ಜೀವ ಬೆದರಿಕೆ ಪತ್ರ

ಕೇರಳದ ಸಿಎಂ ಪಿಣರಾಯಿ ವಿಜಯನ್ ಗೆ ಮಾವೋವಾದಿಗಳಿಂದ ಜೀವ ಬೆದರಿಕೆ ಪತ್ರ
ತಿರುವನಂತಪುರಂ , ಶನಿವಾರ, 16 ನವೆಂಬರ್ 2019 (07:02 IST)
ತಿರುವನಂತಪುರಂ : ನಕ್ಸಲರ ಮೇಲೆ ದಾಳಿ ಮಾಡಿ ಅವರ ಸಾವಿಗೆ ಕಾರಣರಾದ ಕೇರಳದ ಸಿಎಂ ಪಿಣರಾಯಿ ವಿಜಯನ್ ಮೇಲೆ ಪ್ರತಿಕಾರ ತೀರಿಸಿಕೊಳ್ಳುವುದಾಗಿ ಮಾವೋವಾದಿಗಳು ಜೀವ ಬೆದರಿಕೆ ಪತ್ರ ಕಳುಹಿಸಿದ್ದಾರೆ.



ಕಳೆದ ತಿಂಗಳಿನಲ್ಲಿ ಕೇರಳದ ಪಾಲಕ್ಕಾಡ್ ನ ಅಗಾಲಿ ಕಾಡುಗಳಲ್ಲಿ ಮಾವೋವಾದಿಗಳ ಮೇಲೆ ಕೇರಳದ ವಿಶೇಷ ಭದ್ರತಾ ಪಡೆಗಳು ದಾಳಿ ನಡೆಸಿದ್ದು, ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಮಾವೋವಾದಿಗಳು ಮೃತಪಟ್ಟಿದ್ದರು.

 

ಇದರಿಂದ ರೊಚ್ಚಿಗೆದ್ದ ಮಾವೋವಾದಿಗಳು, ತಮ್ಮ ಸ್ನೇಹಿತರ ಸಾವಿಗೆ ಕಾರಣರಾದ ಸಿಎಂ ಪಿಣರಾಯಿ ವಿಜಯನ್ ಅವರನ್ನು ಕೊಂದು ಪ್ರತಿಕಾರ ತೀರಿಸಿಕೊಳ್ಳುತ್ತೇವೆ ಎಂದು ಕೇರಳದ ವಡಕಾರ ಪೊಲೀಸ್ ಠಾಣೆಗೆ ಪತ್ರ ಕಳುಹಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ದೇಶದ ಆರ್ಥಿಕತೆ ಉತ್ತಮವಾಗಿದೆ ಎಂಬುದಕ್ಕೆ ಸಚಿವ ಸುರೇಶ್ ಅಂಗಡಿ ನೀಡಿದ್ದಾರೆ ಈ ಸಮರ್ಥನೆ