ವಿವಾಹಿತ ಪುತ್ರಿಯ ಮೇಲೆ ರೇಪ್ ಎಸಗಲು ಪ್ರಯತ್ನಿಸಿದ ಆರೋಪಿ ಅರೆಸ್ಟ್

Webdunia
ಸೋಮವಾರ, 11 ಡಿಸೆಂಬರ್ 2023 (08:48 IST)
ಲೈಂಗಿಕ ಕ್ರಿಯೆಯಲ್ಲಿ ತೊಡಗಲು ನಿರಾಕರಿಸಿದ ವಿವಾಹಿತ ಮಗಳನ್ನು ಹುಲ್ಲು ಕತ್ತರಿಸುವ ಕಟ್ಟರ್‌ನಿಂದ ಸ್ವಂತ ತಂದೆಯೇ ಕತ್ತರಿಸಿ ಹಾಕಿದ ಘಟನೆ ಮುಜಪ್ಪರ್‌ನಗರದ  ಮುಸ್ತಫಾಗಂಜ್ ಎಂಬ ಹಳ್ಳಿಯಲ್ಲಿ ನಡೆದಿದೆ. 
 
ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಎರಡು ವರ್ಷಗಳ ಹಿಂದಾದ ತನ್ನ ಪತ್ನಿಯ ಸಾವು ಕೂಡ ಆತ್ಮಹತ್ಯೆಯಲ್ಲ ತಾನೇ ಕೊಂದಿದ್ದು ಎಂದು ಸಹ ಒಪ್ಪಿಕೊಂಡಿದ್ದಾನೆ. ಆರೋಪಿಯ ಮಗಳು ಕಳೆದ ನಾಲ್ಕು ತಿಂಗಳ ಹಿಂದೆ ಪಕ್ಕದೂರಿನ ಒಂದು ಸಣ್ಣ ಅಂಗಡಿ ಮಾಲೀಕನನ್ನು ಮದುವೆಯಾಗಿದ್ದಳು. 
 
ಎರಡು ದಿನಗಳ ಹಿಂದೆ ಆಕೆ ಗಂಡನ ಜತೆ ತವರಿಗೆ ಬಂದಿದ್ದಳು. ಬುಧವಾರ ರಾತ್ರಿ ಕುಡಿದು ಮನೆಗೆ ಬಂದ ರಕ್ತು ತನ್ನ ಅಳಿಯ ಮಗಳು ನಿದ್ರಿಸುತ್ತಿದ್ದ ಕೋಣೆಗೆ ಬಂದು ಅಳಿಯನ ಬಳಿ ಜಗಳವಾಡತೊಡಗಿದ. ತಕ್ಷಣ ಮನೆಯಿಂದ ಆಚೆ ಹೋಗದಿದ್ದರೆ ಕೊಲ್ಲುವುದಾಗಿ ಆತ ಅಳಿಯನಿಗೆ ಬೆದರಿಕೆ ಹಾಕಿದ.  ಆತ ಮನೆಯಿಂದ ಆಚೆ ಹೋದ ಮೇಲೆ ಮಗಳ ಮೇಲೆರಗಿ ಅತ್ಯಾಚಾರಕ್ಕೆ ಪ್ರಯತ್ನಿಸಿದ. ಆತನಿಗೆ ಪ್ರತಿರೋಧ ತೋರಿದ ಆಕೆ ಸಹಾಯಕ್ಕಾಗಿ ಕೂಗಿಕೊಂಡಳು. ಇದರಿಂದ ಸಿಟ್ಟಿಗೆದ್ದ ಆತ ಅಲ್ಲೇ ಇದ್ದ ಮೇವು ಕತ್ತರಿಸುವ ಸಾಧನದಿಂದ ಆಕೆಯ ಕುತ್ತಿಗೆ, ಕೈ, ಹೊಟ್ಟೆ, ಕಾಲುಗಳಿಗೆ ಮಾರಕವಾಗಿ ದಾಳಿ ನಡೆಸಿ ಕೊಂದು ಹಾಕಿದ. ಆಕೆಯ ಮೇಮೇಲೆ 15 ರಿಂದ 20 ಗಾಯದ ಗುರುತುಗಳಿವೆ. 
 
ಆರೋಪಿಯ ರಕ್ತುವಿನ 5 ಜನ ಮಕ್ಕಳಲ್ಲಿ ಇವಳೇ ದೊಡ್ಡವಳಾಗಿದ್ದಳು. ಘಟನೆ ನಡೆದ ಸಮಯದಲ್ಲಿ ನಾಲ್ಕು ಜನ ಅಪ್ರಾಪ್ತ ಮಕ್ಕಳು ಇನ್ನೊಂದು ಕೋಣೆಯಲ್ಲಿ ನಿದ್ರಿಸುತ್ತಿದ್ದರು ಎಂದು ತಿಳಿದು ಬಂದಿದೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಾಲು ಮರದ ತಿಮ್ಮಕ್ಕನ ಹೆಸರಿನಲ್ಲಿ ಹೊಸ ಘೋಷಣೆ ಮಾಡಿದ ಸಿಎಂ ಸಿದ್ದರಾಮಯ್ಯ

Viral video: ಗರ್ಭಿಣಿ ಮಹಿಳೆ ಮೇಲೆ ಮಾನವೀಯತೆ ಮರೆತು ಸ್ಕೂಟಿ ಹತ್ತಿಸಿದ ಪೊಲೀಸ್

ಶೂದ್ರರು ತಮ್ಮ ವಿರೋಧಿಯಾಗಿರುವ ಆರ್ ಎಸ್ಎಸ್ ಸೇರುತ್ತಾರಲ್ಲಾ ಏನು ಹೇಳೋದು: ಸಿದ್ದರಾಮಯ್ಯ

ಇಂದಿರಾ ಗಾಂಧಿ ದೇಶದ ಪ್ರೇಮದ, ಧೈರ್ಯದ ಪ್ರತೀಕ: ಡಿಕೆ ಶಿವಕುಮಾರ್

ಪಿಎಂ ಕಿಸಾನ್ ಸಮ್ಮಾನ್ ಯೋಜನೆ 21 ನೇ ಕಂತು ಬಿಡುಗಡೆ: ಇಂದೇ ಖಾತೆ ಚೆಕ್ ಮಾಡಿ

ಮುಂದಿನ ಸುದ್ದಿ