Publish Date: Fri, 08 Dec 2023 (15:20 IST)
Updated Date: Fri, 08 Dec 2023 (15:33 IST)
ಹಾಡಹಗಲೇ ವಕೀಲನ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 6 ಜನ ಆರೋಪಿಗಳ ವಿರುದ್ಧ ಕಲಬುರಗಿ ವಿವಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.. ಆರೋಪಿಗಳಾದ ನೀಲಕಂಠ ಪಾಟೀಲ್, ವಿಜಯಕುಮಾರ್, ಸಿದ್ದಣ್ಣಗೌಡ, ಸಿದ್ರಾಮ್, ಅವ್ವಣ್ಣ, ಗುರು ಸೇರಿದಂತೆ 6 ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಕೋರ್ಟ್‌ಗೆ ತೆರಳುತ್ತಿದ್ದ ವೇಳೆ ಶ್ರೀಗಂಗಾ ವಿಹಾರ್ ಅಪಾರ್ಟ್ಮೆಂಟ್ ಬಳಿ ವಕೀಲ ವೀರಣ್ಣ ಗೌಡರನ್ನ ಮಾರಕಾಸ್ತ್ರಗಳಿಂದ ಹಂತಕರು ಅಟ್ಟಾಡಿಸಿ ಹತ್ಯೆ ಮಾಡಿದ್ರು.. ಸದ್ಯ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಹತ್ಯೆ ಮಾಡಿರುವ ಆರೋಪ ಹಿನ್ನೆಲೆ ಕಲಬುರಗಿ ವಿವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.