Publish Date: Fri, 04 Nov 2016 (15:08 IST)
Updated Date: Fri, 04 Nov 2016 (15:16 IST)
ತಂದೆ ಮತ್ತು ಮಗ ಸೇರಿ 9 ವರ್ಷ ವಯಸ್ಸಿನ ಅವಳಿ ಸಹೋದರಿಯರ ಮೇಲೆ ಒಂದು ವರ್ಷಗಳ ಕಾಲ ಅತ್ಯಾಚಾರವೆಸಗಿದ ವಿಲಕ್ಷಣ, ಹೇಯ ಘಟನೆ ಹೈದ್ರಾಬಾದ್‌ನಲ್ಲಿ ನಡೆದಿದೆ. ಮತ್ತೂ ಘೋರ ಸಂಗತಿ ಎಂದರೆ ನೆರೆಮನೆಯವರ ಈ ಕೀಚಕ ಕೃತ್ಯಕ್ಕೆ ಆ ಬಾಲಕಿಯರಿಬ್ಬರ ತಾಯಿ ಸಹ ಬೆಂಬಲ ನೀಡಿರುವುದು.
ಮೈಲಾರದೇವಪಲ್ಲಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು ಜಾಫರ್ ಮತ್ತು ಆತನ 16 ವರ್ಷದ ಮಗ ನೆರೆಮನೆಯಲ್ಲಿ ವಾಸಿಸುತ್ತಿದ್ದ ಸಹೋದರಿಯರ ಮೇಲೆ ಒಂದು ವರ್ಷದಿಂದ ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಪೀಡಿತರಿಬ್ಬರು ನೇಪಾಳ ಮೂಲದವರಾಗಿದ್ದು, ಅವರ ತಂದೆ ಹೈದ್ರಾಬಾದಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದರಿಂದ ಇಲ್ಲಿಯೇ ನೆಲೆಯೂರಿದ್ದಾರೆ.
ಅವರ ದೌರ್ಜನ್ಯದಿಂದ ರೋಸಿ ಹೋದ ಬಾಲಕಿಯರಲ್ಲಿ ಒಬ್ಬಳು ತಮ್ಮ ದುರವಸ್ಥೆಯ ಬಗ್ಗೆ ಶಿಕ್ಷಕಿಯಲ್ಲಿ ಹೇಳಿಕೊಂಡಿದ್ದಾಳೆ. ಆಕೆ ಈ ವಿಷಯವನ್ನು ಮಕ್ಕಳ ಹಕ್ಕಿಗಾಗಿ ಕೆಲಸ ಮಾಡುವ ಸ್ವಯಂ ಸೇವಾ ಸಂಸ್ಥೆಗೆ ತಿಳಿಸಿದ್ದಾಳೆ.
ಎನ್‌ಜಿಓ ಈ ವಿಷಯವನ್ನು ಪೊಲೀಸ್ ಉಪ ಆಯುಕ್ತ(ಶಂಶಾಬಾದ್) ಪಿ.ವಿ ಪದ್ಮಜಾ ಅವರಿಗೆ ತಿಳಿಸಲಾಗಿದ್ದು, ಗುರುವಾರ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ