Select Your Language

Notifications

webdunia
webdunia
webdunia
webdunia

ತಂದೆಯ ಅಂತ್ಯ ಕ್ರಿಯೆ: ಅವಕಾಶ ಕೋರಿದ ಜೈಲಿನಲ್ಲಿರುವ ಮಗ ಅಬ್ಬಾಸ್ ಅನ್ಸಾರಿ

Mukhtar Ansari Death

Sampriya

ನವದೆಹಲಿ , ಶುಕ್ರವಾರ, 29 ಮಾರ್ಚ್ 2024 (21:05 IST)
Photo Courtesy
ನವದೆಹಲಿ:  ಪ್ರಸ್ತುತ ಕಾಸ್ಗಂಜ್ ಜೈಲಿನಲ್ಲಿರುವ ಮೃತ ಮುಖ್ತಾರ್ ಅನ್ಸಾರಿ ಅವರ ಪುತ್ರ ಅಬ್ಬಾಸ್ ಅನ್ಸಾರಿ ಅವರು ತಮ್ಮ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಅನುಮತಿ ಕೋರಿ ಸುಪ್ರೀಂ ಕೋರ್ಟ್‌ನ ಮೊರೆ ಹೋಗಿದ್ದಾರೆ.

ಅಬ್ಬಾಸ್ ಅನ್ಸಾರಿ ಉತ್ತರ ಪ್ರದೇಶದ ಮೌ ಕ್ಷೇತ್ರದ ಶಾಸಕರಾಗಿದ್ದಾರೆ. ಇನ್ನೂ ತಂದೆಯ ಪ್ರಕರಣದಲ್ಲಿ ಶಾಮೀಲಾಗಿರುವ ಕಾರಣ ಅಬ್ಬಾಸ್ ಅನ್ಸಾರಿ ಕೂಡ ಜೈಲು ಶಿಕ್ಷೆಗೆ ಒಳಗಾಗಿದ್ದಾನೆ.

ಇಂದು ಶುಭ ಶುಕ್ರವಾರದ ಕಾರಣ ಸುಪ್ರೀಂ ಕೋರ್ಟ್‌ಗೆ ರಜೆ ಇರುವುದರಿಂದ ಅಬ್ಬಾಸ್ ಅನ್ಸಾರಿ ಅವರ ವಕೀಲರು ತುರ್ತು ವಿಚಾರಣೆಗೆ ಒತ್ತಾಯಿಸಿ ಸುಪ್ರೀಂ ಕೋರ್ಟ್‌ನ ರಜೆಯ ಅಧಿಕಾರಿಯನ್ನು ಸಂಪರ್ಕಿಸಿದ್ದಾರೆ.

ಮುಖ್ತಾರ್ ಅನ್ಸಾರಿ ಅವರ ಕುಟುಂಬ ಶನಿವಾರ ಬೆಳಿಗ್ಗೆ ಅವರ ಅಂತಿಮ ವಿಧಿಗಳನ್ನು ನಡೆಸುವ ಸಾಧ್ಯತೆಯಿದೆ. ಶನಿವಾರ ಬೆಳಿಗ್ಗೆ ಪ್ರಾರ್ಥನೆಯ ನಂತರ ಅವರ ಅಂತ್ಯಕ್ರಿಯೆ ನಡೆಸಲು ಸಿದ್ಧತೆ ನಡೆಸಿದ್ದೇವೆ ಮತ್ತು ಅವರ ದೇಹವನ್ನು ಬಂದಾದಿಂದ ಗಾಜಿಪುರಕ್ಕೆ ಸಾಗಿಸಲಾಗುತ್ತಿದೆ ಎಂದು ಅವರ ಕುಟುಂಬ ತಿಳಿಸಿದೆ.

ಬಂದಾ ಜಿಲ್ಲಾ ಜೈಲಿನಲ್ಲಿದ್ದ ದರೋಡೆಕೋರ ರಾಜಕಾರಣಿ ಮುಖ್ತಾರ್ ಬನ್ಸಾರಿ ಅವರು ಇಂದು ಉತ್ತರ ಪ್ರದೇಶದ ಬಂದಾದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಂಡಿ ಕ್ಷೇತ್ರದಲ್ಲಿ ನಟಿ ಕಂಗನಾ ರಣಾವತ್ ಬಿರುಸಿನ ಪ್ರಚಾರ