Publish Date: Mon, 07 Aug 2017 (10:30 IST)
Updated Date: Mon, 07 Aug 2017 (10:33 IST)
ನವದೆಹಲಿ: ಊಟದ ವಿಚಾರಕ್ಕಾಗಿ ಪತ್ನಿ ಜತೆ ಜಗಳವಾಡಿ ಕೊಲೆಯ ಹಂತಕ್ಕೆ ತಲುಪುವ ಕೆಲವು ಘಟನೆಗಳು ಇತ್ತೀಚೆಗೆ ಸಾಮಾನ್ಯವಾಗುತ್ತಿದೆ. ಆದರೆ ಇಲ್ಲೊಬ್ಬ ಪತ್ನಿ ಜತೆ ಜಗಳವಾಡಿ ಮಕ್ಕಳನ್ನೇ ಕೊಂದಿದ್ದಾನೆ!
ಗುರ್ ಗಾಂವ್ ನಲ್ಲಿ ಇಂತಹದ್ದೊಂದು ಘೋರ ಘಟನೆ ನಡೆದಿದೆ. ರಾತ್ರಿ 10 ಗಂಟೆ ವೇಳೆಗೆ ಮದ್ಯ ಸೇವಿಸಿ ಮನೆಗೆ ಬಂದಿದ್ದ 40 ವರ್ಷದ ಮುಕೇಶ್ ಯಾದವ್ ಎಂಬಾತ ಊಟದ ವಿಚಾರಕ್ಕಾಗಿ ಪತ್ನಿ ಜತೆ ಜಗಳವಾಡಿದ್ದಲ್ಲದೆ ಹಲ್ಲೆ ನಡೆಸಿದ್ದ.
ಈ ಸಂದರ್ಭದಲ್ಲಿ ಅಮ್ಮನನ್ನು ರಕ್ಷಿಸಲು ಗಟ್ಟಿಯಾಗಿ ತಬ್ಬಿಕೊಂಡ 3 ಮತ್ತು 5 ವರ್ಷದ ಹೆಣ್ಣು ಮಕ್ಕಳಿಗೆ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾನೆ. ಇದೀಗ ಆರೋಪಿಯನ್ನು ಬಂಧಿಸಲಾಗಿದೆ.