Select Your Language

Notifications

webdunia
webdunia
webdunia
webdunia

ರೈತರು ಬೀಜ ಖರೀದಿಸಲು ಹಳೆಯ 500 ನೋಟು ಬಳಸಲು ಅವಕಾಶ: ಕೇಂದ್ರ ಸರಕಾರ

ರೈತರು ಬೀಜ ಖರೀದಿಸಲು ಹಳೆಯ 500 ನೋಟು ಬಳಸಲು ಅವಕಾಶ: ಕೇಂದ್ರ ಸರಕಾರ
ನವದೆಹಲಿ , ಸೋಮವಾರ, 21 ನವೆಂಬರ್ 2016 (16:23 IST)
ದೇಶಾದ್ಯಂತ ನೋಟು ನಿಷೇಧದ ಬಿಸಿ ಮುಂದುವರಿದಿರುವಂತೆಯೇ ಕೇಂದ್ರ ಸರಕಾರ ರೈತರಿಗೆ ಅನುಕೂಲ ಮಾಡಿಕೊಡಲು ಹಳೆಯ 500 ರೂ.ನೋಟುಗಳನ್ನು ಬೀಜಗಳ ಖರೀದಿಗಾಗಿ ಬಳಸಲು ಅವಕಾಶ ನೀಡಿ ಆದೇಶ ಹೊರಡಿಸಿದೆ.
 
ಕೇಂದ್ರ ಮತ್ತು ರಾಜ್ಯ ಸರಕಾರಗಳ ಆಧೀನದಲ್ಲಿರುವ ಬೀಜ ಖರೀದಿ ಕೇಂದ್ರಗಳಲ್ಲಿ ರೈತರು ಹಳೆಯ 500 ರೂಪಾಯಿ ನೋಟುಗಳನ್ನು ನೀಡಿ ಬೀಜ ಖರೀದಿಸಬಹುದು. ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಇಂತಹ ಕ್ರಮ ಕೈಗೊಳ್ಳಲಾಗಿದೆ ಎಂದು ವಿತ್ತ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
 
ರೈತರು ವಾರಕ್ಕೆ 25 ಸಾವಿರ ರೂಪಾಯಿಗಳನ್ನು ಬ್ಯಾಂಕ್‌ನಿಂದ ಹಿಂಪಡೆಯಬಹುದು ಎನ್ನುವ ಆದೇಶದ ನಂತರ, ಇದೀಗ ಹಳೆಯ ನೋಟುಗಳನ್ನು ಬಳಸುವಂತೆ  ರೈತರ ಪರವಾಗಿ ಕೇಂದ್ರ ಸರಕಾರ ಮತ್ತೊಂದು ಆದೇಶ ನೀಡಿದೆ.
 
ಅದನ್ನು ಹೊರತುಪಡಿಸಿ, ರೈತರು ಬೆಳೆ ವಿಮೆ ಕಂತಿನ ಗಡುವನ್ನು 15 ದಿನಗಳಿಗೆ ವಿಸ್ತರಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿದ್ದಲ್ಲದೇ ಎಪಿಎಂಸಿ ನೋಂದಾಯಿತ ವರ್ತಕರು ವಾರಕ್ಕೆ 50 ಸಾವಿರ ರೂಪಾಯಿಗಳನ್ನು ಬ್ಯಾಂಕ್‌ ಖಾತೆಯಿಂದ ಪಡೆಯಬಹುದಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ನೋಟು ನಿಷೇಧ ಟೀಕಿಸಿದ ಸುಪ್ರೀಂಕೋರ್ಟ್ ರಾಷ್ಟ್ರ ವಿರೋಧಿಯೇ?: ಬಿಜೆಪಿಗೆ ರಾಹುಲ್ ಗಾಂಧಿ