ವಿವಾಹ ಭರವಸೆ: ಯುವತಿಯ ಮೇಲೆ ನಿರಂತರ ಅತ್ಯಾಚಾರ

Webdunia
ಶುಕ್ರವಾರ, 10 ನವೆಂಬರ್ 2023 (15:10 IST)
ಆರೋಪಿ ಉಪನ್ಯಾಸಕ ತನ್ನನ್ನು ವಿವಾಹವಾಗಲು ಒಪ್ಪಿಕೊಳ್ಳುವವರೆಗೂ ಧರಣಿಯನ್ನು ಮುಂದುವರಿಸುವುದಾಗಿ ಯುವತಿ ಬೆದರಿಕೆ ಒಡ್ಡಿದ್ದಾಳೆ.ವಿವಾಹವಾಗುವುದಾಗಿ ಸುಳ್ಳು ಭರವಸೆಗಳನ್ನು ನೀಡಿ ವಿವಿಧ ಸಂದರ್ಭಗಳಲ್ಲಿ ಪ್ರೊಫೆಸರ್ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆಕೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. 
 
ಮದುವೆಯ ಆಮಿಷ ಒಡ್ಡಿ ಉಪನ್ಯಾಸಕನೊಬ್ಬ ತನ್ನ ಮೇಲೆ ಪದೇ ಪದೇ ಅತ್ಯಾಚಾರ ಮಾಡಿದ್ದಾರೆ ಎಂದು ಮಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬಳು ಆರೋಪ ಮಾಡಿದ್ದಾಳೆ. 
 
ವಿಶ್ವವಿದ್ಯಾನಿಲಯದ ಅಭಿವೃದ್ಧಿ ಯೋಜನೆಯಡಿಯಲ್ಲಿ ಭಾಷೆಯನ್ನು ಅಭ್ಯಸಿಸುತ್ತಿರುವ ವಿದ್ಯಾರ್ಥಿನಿ,  ಉಪನ್ಯಾಸಕ ಆರೋಪಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ತನ್ನ ಮನೆಯಲ್ಲಿ ಕಳೆದ ಜೂನ್ 2 ರಂದು ಅತ್ಯಾಚಾರ ಮಾಡಿದ್ದಾರೆಂದು ಆಪಾದಿಸಿದ್ದಾಳೆ.
 
ನಂತರ ತಮ್ಮ ಕೃತ್ಯದ ಬಗ್ಗೆ ತೀವ್ರ ಪಶ್ಚಾತ್ತಾಪ ವ್ಯಕ್ತಪಡಿಸಿದ ಅವರು ,ಅವಳನ್ನು ಮದುವೆಯಾಗುವ ಭರವಸೆ ನೀಡಿದರು. ನಂತರ ವರ್ಷಗಳ ಕಾಲ ಅವರಿಬ್ಬರು ದೈಹಿಕ ಸಂಬಂಧವನ್ನು ಮುಂದುವರೆಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. 
 
ಸ್ವಲ್ಪ ಸಮಯದ ನಂತರ ಆಕೆಯಿಂದ ದೂರವಿರುವ ಪ್ರಯತ್ನ ಮಾಡಿದ ಅವರು, ಮದುವೆಯಾಗುವುದಾಗಿ ಮಾಡಿದ  ವಾಗ್ದಾನವನ್ನು ಕೂಡ ಅಲ್ಲಗಳೆದರು ಎಂದು ಆಕೆ ಆಪಾದಿಸಿದ್ದಾಳೆ. ಈ ಕುರಿತು ವಿಶ್ವವಿದ್ಯಾನಿಲಯದ ಉಪಕುಲಪತಿಗಳ ಬಳಿ ಸಹ ಪೀಡಿತೆ ಹೇಳಿಕೊಂಡಿದ್ದಾಳೆ. 
 
ಈ ಸಂಬಂಧ ವಿವರಣೆಯನ್ನು ಕೋರುವಂತೆ ಪ್ರಾಧ್ಯಾಪಕರಿಗೆ ನೋಟಿಸ್ ನೀಡಲಾಗಿದೆ, ಎಂದು  ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್  ಹೇಳಿದ್ದಾರೆ. 
 
ತಮ್ಮ ಮೇಲಿನ ಆರೋಪವನ್ನು ತಳ್ಳಿ ಹಾಕಿರುವ ಉಪನ್ಯಾಸಕ, ಇದರಲ್ಲಿ ಹುರುಳಿಲ್ಲ, ನನ್ನ ಹೆಸರನ್ನು ಕೆಡಿಸಲು  ಮಾಡಿದ ಪಿತೂರಿ ಇದು. ನಾನು ಉತ್ತಮ ಹಿನ್ನೆಲೆಯಿಂದ ಬಂದಿದ್ದೇನೆ. ಈ ಆರೋಪಗಳು ಆಧಾರರಹಿತವಾಗಿವೆ. ನಾನು ಸಹ ಕಾನೂನುಬದ್ಧವಾಗಿ ಹೋರಾಡುತ್ತೇನೆ. ಯಾವುದೇ ರೀತಿಯ ವಿಚಾರಣೆಗೆ ನಾನು ಸಿದ್ಧ ಎಂದು ಹೇಳಿದ್ದಾರೆ. 
 
"ನನ್ನ ಮೇಲೆ ಆರೋಪ ಹೊರಿಸುತ್ತಿರುವ ಯುವತಿ ಈ ಮೊದಲು ಕೂಡ  ಇದೇ ರೀತಿಯಲ್ಲಿ ನನಗೆ ಬೆದರಿಕೆ ಒಡ್ಡಿದ್ದಳು. ನಾನು ನನ್ನ ವಕೀಲರ ಮೂಲಕ  ಒಂದು ನೋಟಿಸ್ ಜಾರಿ ಮಾಡಿದ್ದೆ. ಆದರೆ ಅದಕ್ಕೆ ಆಕೆ ಸ್ಪಂದಿಸಲಿಲ್ಲ. ಆಕೆಯ ಜತೆ ನನಗೆ ಸಾಮಾನ್ಯ ಪರಿಚಯವಿದೆಯಷ್ಟೇ" ಎಂದು  ಪ್ರತಿಕ್ರಿಯಿಸಿದ್ದಾರೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಉಡುಪಿಯಲ್ಲಿ ಪ್ರಧಾನಿ ಮೋದಿ: ಚಿತ್ರ ಹಿಡಿದು ನಿಂತಿದ್ದ ಮಕ್ಕಳಿಗೆ ಮೋದಿ ಹೇಳಿದ್ದೇನು

ಪ್ರಧಾನಿ ಮೋದಿ ಇನ್ನು ಭಾರತ ಭಾಗ್ಯವಿಧಾತ: ಉಡುಪಿಯಲ್ಲಿ ವಿಶೇಷ ಬಿರುದು ನೀಡಿ ಪುತ್ತಿಗೆ ಶ್ರೀ

ಮೋದಿಗಾಗಿ ಬಿಸಿಲಲ್ಲಿ ನಿಂತು ಕಾಯುತ್ತಿದ್ದ ವಿದ್ಯಾರ್ಥಿಗಳು: ನಿರಾಸೆ ಮಾಡದ ಪ್ರಧಾನಿ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ಪ್ರಧಾನಿ ಮೋದಿ ಉಡುಪಿ ರೋಡ್ ಶೋ ಆರಂಭ live video

ಮುಂದಿನ ಸುದ್ದಿ
Show comments