Select Your Language

Notifications

webdunia
webdunia
webdunia
webdunia

ಕೆಲಸ ಕೊಡಿಸುವ ನೆಪದಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

women
gajiyabad , ಶುಕ್ರವಾರ, 10 ನವೆಂಬರ್ 2023 (14:17 IST)
ಆರೋಪಿಗಳು ಮಹಿಳೆಗೆ ಮತ್ತೇರಿಸುವ ಪದಾರ್ಥಗಳನ್ನು ಬೆರೆಸಿದ ತಂಪು ಪಾನೀಯವನ್ನು ನೀಡಿ  ಆಕೆ ಪ್ರಜ್ಞಾಹೀನಳಾದಾಗ ಆಕೆಯ ಮೇಲೆ ಆರೋಪಿಗಳು ಸಾಮೂಹಿಕ ಅತ್ಯಾಚಾರವನ್ನೆಸಗಿದ್ದಾರೆ ಎಂದು ಮುರಾದ್‌ನಗರ್  ಪೊಲೀಸರು ತಿಳಿಸಿದ್ದಾರೆ. 
 
ನಾನು ನಿನಗೆ ಉತ್ತಮ ಕೆಲಸವನ್ನು ಹುಡುಕಿ ಕೊಡುತ್ತೇನೆ. ಮುರಾದ್‌ನಗರದಲ್ಲಿ ನನ್ನನ್ನು ಭೇಟಿಯಾಗು ಎಂದು ಹೇಳಿದ್ದ. ಆಕೆ ಅಲ್ಲಿಗೆ ತಲುಪಿದಾಗ ಕಾರ್ ಒಳಗೆ ಕುಳಿತುಕೊಳ್ಳುವಂತೆ ಹೇಳಿದ. ಆ ಸಮಯದಲ್ಲಿ ಇರ್ಫಾನ್ ಮತ್ತು  ಮತ್ತೊಬ್ಬ ಅಪರಿಚಿತ ಆರೋಪಿ ಕೂಡ ಕಾರಿನಲ್ಲಿದ್ದರು. ಕಾರ್ ಒಳಗೆ ಕುಳಿತುಕೊಂಡ ಆಕೆಗೆ ಆರೋಪಿಗಳು ಮತ್ತೇರಿಸುವ ಪದಾರ್ಥಗಳನ್ನು ಬೆರೆಸಿದ ತಂಪು ಪಾನೀಯವನ್ನು ನೀಡಿದ್ದಾರೆ . ಆಕೆ ಪ್ರಜ್ಞಾಹೀನಳಾದಾಗ ಆಕೆಯ ಮೇಲೆ ಆರೋಪಿಗಳು ಸಾಮೂಹಿಕ ಅತ್ಯಾಚಾರವನ್ನೆಸಗಿದ್ದಾರೆ ಎಂದು ಮುರಾದ್‌ನಗರ್  ಪೊಲೀಸ್ ಠಾಣಾಧಿಕಾರಿ ಆರ್. ಪಿ. ಶರ್ಮಾ ತಿಳಿಸಿದ್ದಾರೆ. 
 
40 ವರ್ಷದ ಮಹಿಳೆಯೊಬ್ಬರಿಗೆ ಅಮಲೇರಿಸುವ ಪದಾರ್ಥ ತಿನ್ನಿಸಿ ಚಲಿಸುವ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಮುರಾದ್‌ನಗರ್ ಎಂಬಲ್ಲಿ ನಡೆದಿದೆ. ಮೂವರು ದುಷ್ಕರ್ಮಿಗಳು ಈ ಕುಕೃತ್ಯವನ್ನೆಸಗಿದ್ದು ನಂತರ ಆಕೆಯನ್ನು ಗಂಗಾ ಕಾಲುವೆ ಬಳಿ ಎಸೆದು ಹೋಗಿದ್ದಾರೆ ಎಂದು ತಿಳಿದು ಬಂದಿದೆ. 
 
 
ಅಸ್ವಸ್ಥಳಾಗಿ ಬಿದ್ದಿದ್ದ ಆಕೆಯನ್ನು ನೋಡಿದ ಗಸ್ತು ತಿರುಗುತ್ತಿದ್ದ ಪೊಲೀಸರು ಮುರಾದ್‌ನಗರ ಪೊಲೀಸ್ ಠಾಣೆಗೆ ಆಕೆಯನ್ನು ಕೊಂಡೊಯ್ದರು. ನಂತರ ಆಕೆಯನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ವಿಧವೆಯಾಗಿರುವ ಮಹಿಳೆಗೆ ಮೂವರು ಮಕ್ಕಳಿದ್ದು, ಮೀರತ್ ರಸ್ತೆ ಬಳಿ ಇರುವ ತನ್ನ ಮನೆಯ ಬಳಿಯಲ್ಲಿ ಹಣ್ಣು ಮತ್ತು ತರಕಾರಿಯ ಪುಟ್ಟ ಅಂಗಡಿಯನ್ನು ನಡೆಸುತ್ತಿದ್ದಾಳೆ ಎಂದು ತಿಳಿದು ಬಂದಿದೆ. 
 
ಮೂವರು ಆರೋಪಿಗಳ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಅವರಲ್ಲಿ ಇಬ್ಬರನ್ನು ಪೀಡಿತೆ ಗುರುತಿಸಿದ್ದಾಳೆ. ಅವರಲ್ಲೊಬ್ಬ ಸಂಜಯ್ ನಗರದ ನಿವಾಸಿ ವಕೀಲ್ ಎಂಬಾತನಾಗಿದ್ದು, ಪೀಡಿತಳ ಕಾಲೋನಿಯಲ್ಲಿ ಉಪಾಹಾರ ಗೃಹವನ್ನು ನಡೆಸುತ್ತಿದ್ದಾನೆ. ಇನ್ನೊಬ್ಬನನ್ನು ಇರ್ಫಾನ್ ಎಂದು ಗುರುತಿಸಲಾಗಿದ್ದು, ಇದೀಗ ಮೂವರು ಆರೋಪಿಗಳು ಈಗ ನಾಪತ್ತೆಯಾಗಿದ್ದಾರೆ. 
 
ತನ್ನ ಗಂಡನ ಮರಣಾನಂತರ ಅಮ್ರೋಹಾದಿಂದ ಗಾಜಿಯಾಬಾದಿಗೆ ವಾಸ್ತವ್ಯ ಬದಲಾಯಿಸಿದ್ದ ಮಹಿಳೆ, ಆರೋಪಿ ವಕೀಲನ ಹೋಟೆಲ್‌ನಿಂದ ಆಗಾಗ್ಗೆ ಊಟವನ್ನು ತರುತ್ತಿದ್ದರಾದ್ದರಿಂದ ಆತನ ಪರಿಚಯ ಮಹಿಳೆಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆಯಾಗಲು ನಿರಾಕರಿಸಿದ ಯುವತಿಯ ಮೇಲೆ ಗ್ಯಾಂಗ್‌ರೇಪ್