Publish Date: Thu, 21 Apr 2016 (12:33 IST)
Updated Date: Thu, 21 Apr 2016 (12:41 IST)
ತಾವು ಅಭಿವೃದ್ಧಿಪಡಿಸಿದ ಸಾಮಾಜಿಕ ಜಾಲತಾಣದ ಆ್ಯಪ್ ವಿಫಲವಾದ್ದರಿಂದ 33 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಸಂಭವಿಸಿದೆ. ಎಸ್.ಆರ್.ನಗರದ ಮನೆಯಲ್ಲಿ ಸಾರಜನಕ ಅನಿಲವನ್ನು ಸೇವಿಸಿ ಅವರು ಆತ್ಮಹತ್ಯೆಗೆ ಶರಣಾದರು. ಆತ್ಮಹತ್ಯೆ ನೋಟ್‌ನಲ್ಲಿ ತಾವು ಯಾವುದೇ ನೋವಿಲ್ಲದೇ ಜೀವನ ಕೊನೆಗಾಣಿಸಲು ಸಾರಜನಕ ಅನಿಲ ಸೇವಿಸಿದ್ದಾಗಿ ಬರೆದಿದ್ದಾರೆ.
ಲಕ್ಕಿ ಗುಪ್ತಾ ಅಗರವಾಲ್ ಅಮೀರ್‌ಪೇಟ್ ಡಿಕೆ ರಸ್ತೆಯ ಅಪಾರ್ಟ್‌ಮೆಂಟ್‍ವೊಂದರ ನಿವಾಸಿಯಾಗಿದ್ದು, ಲಕ್ಕಿ ತಂದೆ, ಉದ್ಯಮಿ ಅಶೀಕ್ ಕುಮಾರ್ ಅಗರವಾಲ್ ತಮ್ಮ ಪುತ್ರ ಎಂದಿನಂತೆ ಏಳದಿರುವುದನ್ನು ಕಂಡು ಅನುಮಾನಕ್ಕೆ ಒಳಗಾದರು.
ಬಾಗಿಲನ್ನು ಪದೇ ಪದೇ ತಟ್ಟಿದರೂ ತೆಗೆಯದಿದ್ದಾಗ ಕುಟುಂಬ ಮಲಗುವ ಕೋಣೆ ಬಾಗಿಲನ್ನು ಒಡೆದು ಒಳಗಿನ ದೃಶ್ಯ ಕಂಡಾದ ಸಾರಜನಕ ಅನಿಲ ಸಿಲಿಂಡರ್‌ಗೆ ಜೋಡಿಸಿದ ಮೂಗಿನ ಕವಚವನ್ನು ಧರಿಸಿದ್ದ ಪುತ್ರ ಶವವಾಗಿ ಬಿದ್ದಿದ್ದನ್ನು ಕಂಡರು.
ಅವನು ಅಭಿವೃದ್ಧಿಪಡಿಸಿದ ಸಾಮಾಜಿಕ ಜಾಲ ತಾಣದ ಉಪಕರಣ ಜನಪ್ರಿಯವಾಗದಿದ್ದರಿಂದ ಕಳೆದ ಮೂರು ತಿಂಗಳಿಂದ ಲಕ್ಕಿ ಖಿನ್ನತೆಗೆ ಒಳಗಾಗಿದ್ದಾಗಿ ಲಕ್ಕಿ ಕುಟುಂಬ ಹೇಳಿದೆ. ತಾನು ಅಭಿವೃದ್ಧಿಪಡಿಸಿದ ಆ್ಯಪ್ ವಾಟ್ಸಾಪ್‌ಗಿಂತ ಹೆಚ್ಚು ಜನಪ್ರಿಯವಾಗುತ್ತೆಂದು ಲಕ್ಕಿ ಹೇಳುತ್ತಿದ್ದ.
ಆದರೆ ಹಾಗಾಗಲು ವಿಫಲವಾದ್ದರಿಂದ ಅವರು ಖಿನ್ನತೆಗೆ ಒಳಗಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ತಮ್ಮ ಸಾವಿಗೆ ಮುಂಚೆ ಯಾವುದೇ ನೋವಿಲ್ಲದೇ ಆತ್ಮಹತ್ಯೆ ಮಾಡಿಕೊಳ್ಳುವ ವಿಧಾನ ಕುರಿತು ವ್ಯಾಪಕ ಆನ್‌ಲೈನ್ ಶೋಧ ಮಾಡಿದ್ದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಲಕ್ಕಿ ಅವಿವಾಹಿತರಾಗಿದ್ದು, ಅವರು ತಂದೆ, ತಾಯಿ ಮತ್ತು ಸೋದರನನ್ನು ಅಗಲಿದ್ದಾರೆ.