Publish Date: Mon, 31 Jan 2022 (14:33 IST)
Updated Date: Mon, 31 Jan 2022 (14:35 IST)
ಮೋದಿಯವರ ಆ್ಯಕ್ಟ್ ಈಸ್ಟ್ ಪಾಲಿಸಿ ಈಗ ಭಾರತದ ರಕ್ಷಣಾ ಉತ್ಪನ್ನಗಳಿಗೆ ಬೃಹತ್ ಮಾರುಕಟ್ಟೆಯನ್ನೇ ತೆರೆದಿದೆ.
ದಕ್ಷಿಣ ಚೀನಾ ಸಾಗರ ಪ್ರದೇಶದಲ್ಲಿ ಇರುವ ಎಲ್ಲ ದೇಶಗಳಿಗೆ ಚೀನಾದಿಂದ ಅಭದ್ರತೆ ಕಾಡುತ್ತಿದೆ. ಅದನ್ನು ಸಮರ್ಥವಾಗಿ ಎದುರಿಸಲು ಅವುಗಳಿಗೆ ಸೂಕ್ತವಾದ ಶಸ್ತ್ರಾಸ್ತ್ರಗಳ ಅಭಾವ ಇದೆ.
ಹೀಗಾಗಿ ಅವು ಭಾರತದ ಕಡೆ ಮುಖ ಮಾಡಿವೆ. ಇತ್ತೀಚೆಗೆ ಚೀನಾ ಫಿಲಿಪ್ಪೀನ್ಸ್ನ ಕಡಲ ತೀರದಲ್ಲಿ ಅದರ ಮೀನುಗಾರಿಕಾ ಹಡಗುಗಳಿಗೆ ತೊಂದರೆ ಕೊಟ್ಟಿತ್ತು. ಚೀನಾದ ಯುದ್ಧ ನೌಕೆಗಳನ್ನು ಸಮರ್ಥವಾಗಿ ಎದುರಿಸಲು ಭಾರತದ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಗಿಂತ ಉತ್ತಮವಾದ ಆಯುಧ ಜಗತ್ತಿನಲ್ಲೇ ಇಲ್ಲ.
ವಿಯೆಟ್ನಾಂ ಕೂಡ ಭಾರತದ ಬ್ರಹ್ಮೋಸ್ ಕ್ಷಿಪಣಿಗೆ ಆಸಕ್ತಿ ಹೊಂದಿದ್ದು, ಮುಂದಿನ ತಿಂಗಳು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಲ್ಲಿಗೆ ಭೇಟಿ ನೀಡುವ ಸಾಧ್ಯತೆ ಇದೆ. ಸೌದಿ ಅರೇಬಿಯಾ ಭಾರತದ ಬ್ರಹ್ಮೋಸ್ ಕ್ಷಿಪಣಿಯ ಬಗ್ಗೆ ಆಸಕ್ತಿ ತೋರಿಸಿದೆ.
ಇಂಡೋನೇಷ್ಯಾ, ಮಾಲ್ಡೀವ್್ಸ ಮುಂತಾದ ದೇಶಗಳು ಭಾರತದಿಂದ ಬ್ರಹ್ಮೋಸ್, ಆಕಾಶ್ ಕ್ಷಿಪಣಿ ವ್ಯವಸ್ಥೆಯನ್ನು ಖರೀದಿಸುವಲ್ಲಿ ಆಸಕ್ತಿ ತೋರಿವೆ. ಇದರ ಜೊತೆಗೆ ಭಾರತದ ಲಘು ಹೆಲಿಕಾಪ್ಟರ್ಗಳಿಗೆ ವಿಯೆಟ್ನಾಂ ಮತ್ತು ಮಾರಿಷಸ್ ದೇಶಗಳು ಆಸಕ್ತಿ ತೋರಿಸಿವೆ.
2016-17ರಲ್ಲಿ ಭಾರತದ ರಕ್ಷಣಾ ಕ್ಷೇತ್ರದ ರಫ್ತು 1,521 ಕೋಟಿ ರು. ಇದ್ದದ್ದು 2020-21ರಲ್ಲಿ 8,434 ಕೋಟಿ ರು. ಆಗಿದೆ. 2025ಕ್ಕೆ ಇದನ್ನು 35 ಸಾವಿರ ಕೋಟಿ ರು.ಗೆ ತಲುಪಿಸುವುದು ಮೋದಿ ಸರ್ಕಾರದ ಗುರಿ.
ದಕ್ಕೆ ಭಾರತ ಬ್ರಹ್ಮೋಸ್ನಂತೆಯೇ ಉಳಿದ ತಂತ್ರಜ್ಞಾನವನ್ನೂ ಅಭಿವೃದ್ಧಿಪಡಿಸಬೇಕು. ಎಚ್ಎಎಲ್ ನಿರ್ಮಿಸಿದ ತೇಜಸ್ ಯುದ್ಧ ವಿಮಾನಕ್ಕೆ ಆಗ್ನೇಯ ಏಷ್ಯಾ ದೇಶಗಳಿಂದ ಬೇಡಿಕೆ ಬರುತ್ತಿದೆ.