Select Your Language

Notifications

webdunia
webdunia
webdunia
webdunia

'ಏಕ ಶ್ರೇಣಿ-ಏಕಪಿಂಚಣಿ' : ಆತ್ಮಹತ್ಯೆಗೆ ಶರಣಾದ ಮಾಜಿ ಸೈನಿಕ

'ಏಕ ಶ್ರೇಣಿ-ಏಕಪಿಂಚಣಿ' : ಆತ್ಮಹತ್ಯೆಗೆ ಶರಣಾದ ಮಾಜಿ ಸೈನಿಕ
ನವದೆಹಲಿ , ಬುಧವಾರ, 2 ನವೆಂಬರ್ 2016 (12:47 IST)
'ಏಕ ಶ್ರೇಣಿ-ಏಕ ಪಿಂಚಣಿ' ಯೋಜನೆ ಜಾರಿ ವಿಳಂಬವಾಗುತ್ತಿರುವುದನ್ನು ವಿರೋಧಿಸಿ ಮಾಜಿ ಯೋಧರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. 
ಯೋಜನೆ ಜಾರಿಗೆ ಆಗ್ರಹಿಸಿ ರಾಮ್ ಕಿಶನ್ ಗರ್ಹವಾಲ್  ಜಂತರ್ ಮಂತರ್‌ನಲ್ಲಿ ಪ್ರತಿಭಟನೆಯನ್ನು ನಡೆಸುತ್ತಿದ್ದರು.ಮಂಗಳವಾರ ರಾತ್ರಿ ತಮ್ಮ ಕುಟುಂಬದವರಿಗೆ ಕರೆ ಮಾಡಿದ ಅವರು ಓರ್‌ಓಪಿಗೆ ಸಂಬಂಧಿಸಿದ ಬೇಡಿಕೆಗಳನ್ನು ಪೂರೈಸುವಲ್ಲಿ ಸರ್ಕಾರ ವಿಫಲವಾಗಿದ್ದು ,ಇದರಿಂದ ನೊಂದು ಆತ್ಮಹತ್ಯೆಗೆ ಶರಣಾಗುತ್ತೇನೆ ಎಂದು ಹೇಳಿದ್ದಾರೆ. ವಿಷಕಾರಿ ವಸ್ತುವನ್ನು ಸೇವಿಸಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
 
ಹರಿಯಾಣಾದ ಭಿವಾನಿಯವರಾಗಿದ್ದ ಅವರು ಡೆತ್ ನೋಟ್ ಬರೆದಿಟ್ಟಿದ್ದು, 6 ಮತ್ತು 7 ನೇ ವೇತನ ಆಯೋಗಗಳ ಶಿಫಾರಸ್ಸುಗಳನ್ನು ನಿರಾಕರಿಸಿರುವುದಕ್ಕೆ  ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
 
 "ಭರವಸೆಗಳನ್ನು ಹೊರತಾಗಿಯೂ ಸರ್ಕಾರ ಪಿಂಚಣಿಯಲ್ಲಿನ ವ್ಯತ್ಯಾಸವನ್ನು ಸರಿಪಡಿಸಲು ಶಕ್ತವಾಗಿಲ್ಲ. ನನ್ನದೇ ಶ್ರೇಣಿಯ ಜನರು ನನಗಿಂತ ಹೆಚ್ಚು ಪಿಂಚಣಿ ಪಡೆಯುತ್ತಿದ್ದಾರೆ. ನನ್ನ ಆತ್ಮಹತ್ಯೆಯ ಬಳಿಕವಾದರೂ ಸರ್ಕಾರ ಎಚ್ಚೆತ್ತುಕೊಳ್ಳಬಹುದು ಎಂದು ಅವರು ಆತ್ಮಹತ್ಯಾ ಟಿಪ್ಪಣಿಯಲ್ಲಿ ಬರೆದಿಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹದಿಹರಿಯದವರಿಗೊಂದು ಲೈಫ್ ಸ್ಟೇಜ್ ಆ್ಯಪ್