Select Your Language

Notifications

webdunia
webdunia
webdunia
webdunia

ಇವಿಎಂ ತಿರುಚಲು ಅಸಾಧ್ಯ:: ಇಸಿ ಸವಾಲು

ಇವಿಎಂ ತಿರುಚಲು ಅಸಾಧ್ಯ:: ಇಸಿ ಸವಾಲು
ನವದೆಹಲಿ , ಭಾನುವಾರ, 21 ಮೇ 2017 (11:03 IST)
ಕೇಂದ್ರ ಚುನಾವಣಾ ಆಯೋಗ ನಡೆಸಿದ ವಿದ್ಯುನ್ಮಾನ ಮತಯಂತ್ರ(ಇವಿಎಂ) ಹಾಗೂ ವಿವಿಪ್ಯಾಟ್‌ ಪ್ರಾತ್ಯಕ್ಷಿಕೆ ಯಶಸ್ವಿಯಾಗಿದ್ದು, ಮತಯಂತ್ರದಲ್ಲಿ ಯಾವುದೇ ದೋಷಗಳಿಲ್ಲ. ಅದನ್ನು ತಿರುಚಲು ಸಾಧ್ಯವಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ.
 
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ನಜೀಂ ಜೈದಿ, ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಇವಿಎಂಗಳನ್ನು ಸಿದ್ಧಪಡಿಸಲಾಗಿದ್ದು, ಇವುಗಳನ್ನು ತಿರುಚಲು ಸಾಧ್ಯವಿಲ್ಲ. ಒಂದು ವೇಳೆ ಸಾಧ್ಯವಿದೆ ಎನ್ನುವದಾದರೆ ಜೂನ್ 3ರಿಂದ ಹ್ಯಾಕ್ ಮಾಡಿ ತೋರಿಸುವಂತೆ ಸವಾಲು ಹಾಕಿದ್ದಾರೆ.
 
ಪ್ರತಿಯೊಂದು ರಾಜಕೀಯ ಪಕ್ಷಕ್ಕೂ ನಾಲ್ಕು ಗಂಟೆಗಳ ಅವಧಿಯನ್ನು ನಿಗದಿ ಪಡಿಸಲಾಗಿದೆ. ಈ ಅವಧಿಯಲ್ಲಿ ರಾಜಕೀಯ ಪಕ್ಷಗಳು ಇವಿಎಂ, ವಿವಿಪ್ಯಾಟ್ ಮತ್ತು ಬ್ಯಾಲೆಟ್ ಯುನಿಟ್ ಗಳನ್ನು ಪರೀಕ್ಷಿಸಬಹುದು. ಯಾವುದೇ ಪಕ್ಷ ಯಾವುದೇ ನಾಲ್ಕು ಕ್ಷೇತ್ರಗಳಲ್ಲಿ ಬಳಸಿದ ಮತಯಂತ್ರಗಳನ್ನು ಪರೀಕ್ಷೆಗೆ ಆಯ್ದುಕೊಳ್ಳಬಹುದು. ಈ ಸವಾಲಿನಲ್ಲಿ ಭಾಗವಹಿಸುವ ಪಕ್ಷಗಳು ಮೇ -26ರ ಸಂಜೆ 5ಗಂಟೆಯೊಳಗೆ ತಮ್ಮ ಭಾಗವಹಿಸುವಿಕೆ ಖಾತ್ರಿ ಪಡಿಸಬೇಕು ಎಂದು ವಿವರಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

‘ಕಸಬ್ ಬಡಪಾಯಿ, ಕುಲಭೂಷಣ್ ಒಬ್ಬ ದೊಡ್ಡ ಭಯೋತ್ಪಾದಕ’