Select Your Language

Notifications

webdunia
webdunia
webdunia
webdunia

ಮದುವೆ ಮಾಡಿಸಿ ಮೋದಿ ಜೀ ಎಂದು ಮೊರೆಯಿಟ್ಟ ಯುವಕ

ಮದುವೆ ಮಾಡಿಸಿ ಮೋದಿ ಜೀ ಎಂದು ಮೊರೆಯಿಟ್ಟ ಯುವಕ
NewDelhi , ಭಾನುವಾರ, 7 ಮೇ 2017 (10:08 IST)
ನವದೆಹಲಿ: ಪ್ರಧಾನಿ ಮೋದಿಗೆ ಸಾರ್ವಜನಿಕರಿಂದ ಎಂತೆಂತಹಾ ಅಹವಾಲುಗಳು ಬರುತ್ತವೆ ನೋಡಿ. ಇಲ್ಲೊಬ್ಬ ಯುವಕ ಮದುವೆ ಮಾಡಿಸಲು ಪ್ರಧಾನಿ ಮೋದಿಗೆ ಮೊರೆಯಿಟ್ಟಿದ್ದಾರೆ.

 
ಚಂಡೀಘಡ ಮೂಲದ ಮೆಕಾನಿಕಲ್ ಇಂಜಿನಿಯರ್ ಯುವಕನೊಬ್ಬ ತನ್ನ ಪ್ರೀತಿಯ ಹುಡುಗಿಯ ಜತೆ ಮದುವೆ ಮಾಡಿಸಿ ಎಂದು ಪತ್ರ ಬರೆದಿದ್ದಾನೆ. ನರ್ಸ್ ಕೆಲಸ ಮಾಡುತ್ತಿರುವ ತನ್ನ ಪ್ರೀತಿಯ ಹುಡುಗಿ ಜತೆ ಮದುವೆಯಾಗುವುದಕ್ಕೆ ಒಪ್ಪಿಗೆ ನೀಡಿ ಎಂದು ಮನೆಯವರಿಗೆ ಪತ್ರ ಬರೆಯಿರಿ ಎಂದು ಯುವಕ ಮನವಿ ಮಾಡಿದ್ದಾನೆ.

ಇಂತಹ ಹಲವು ಸ್ವಾರಸ್ಯಕರ ದೂರುಗಳು ಪ್ರಧಾನಿ ಕಚೇರಿಗೆ ಬರುತ್ತವೆ ಎನ್ನುತ್ತಾರೆ ಅಧಿಕಾರಿಗಳು. ಒಬ್ಬರಂತೂ ಪೊಲೀಸರು ಅಪರಾಧ ನಡೆದ ಸ್ಥಳಕ್ಕೆ ತಕ್ಕ ಸಮಯಕ್ಕೆ ತಲುಪಲು ಹೆಲಿಕಾಪ್ಟರ್ ಒದಗಿಸಿ ಎಂದೂ ಬೇಡಿಕೆ ಇಟ್ಟಿದ್ದಾರಂತೆ.

ಇನ್ನು ಯಾರೋ ಒಬ್ಬರು ಗಾರ್ಡನ್ ನಿಂದ ಹೂವು ಕೀಳುತ್ತಾರೆ ಎಂದೂ ದೂರಿದ್ದಾರಂತೆ. ಅಂತೂ ಇಂತಹ ದೂರುಗಳು ಅಧಿಕಾರಿಗಳ ಮೊಗದಲ್ಲಿ ನಗು ಮೂಡಿಸುತ್ತಿರುವುದಂತೂ ಸತ್ಯ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಪರ ಮಾತನಾಡಿದ್ದಕ್ಕೆ ಮುಸ್ಲಿಂ ಮಹಿಳಾ ಘಟಕದ ಅಧ್ಯಕ್ಷೆಗೆ ತಕ್ಕ ಶಿಕ್ಷೆ