Daily Horoscope
✕

ಪ್ರೇಯಸಿಯನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಎಂಜಿನಿಯರ್‌

ಸಂಪ್ರಿಯ
ಸೋಮವಾರ, 13 ಜುಲೈ 2026 (16:16 IST)
Photo Credit X
ಗುರುಗ್ರಾಮ: ಛತ್ತೀಸ್‌ಗಢದ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬ ತನ್ನ ಗೆಳತಿಯನ್ನು ಇರಿದು ಕೊಂದು, ನಂತರ ತಾನೂ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.  

ಮಹಿಳೆಯ ಶವವು ವ್ಯಕ್ತಿಯ ಬಾಡಿಗೆ ಮನೆಯಲ್ಲಿ ರಕ್ತದ ಮಡುವಿನಲ್ಲಿ ಪತ್ತೆಯಾಗಿದ್ದರೆ, ಪುರುಷನ ಸೊಂಟದಿಂದ ಅರ್ಧದಷ್ಟು ಕತ್ತರಿಸಿದ ಶವ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ.

25 ವರ್ಷದ ಇಬ್ಬರನ್ನು ಛತ್ತೀಸ್‌ಗಢದ ಭಿಲಾಯಿ ನಿವಾಸಿ ಶ್ರೇಷ್ಠ್ ಮಲಿಕ್ ಮತ್ತು ಆತನ ಗೆಳತಿ ಉತ್ತರ ಪ್ರದೇಶದ ಸೀತಾಪುರದ ಇಶಾರಾ ಅಯ್ಯುಬಿ ಎಂದು ಗುರುತಿಸಲಾಗಿದೆ. ಇಬ್ಬರೂ ಗುರುಗ್ರಾಮದಲ್ಲಿ ಒಂದೇ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.

ಇಶಾರಾ ಅಯ್ಯುಬಿಯ ಕುಟುಂಬದವರು ಅವಳಿಗೆ ಕರೆ ಮಾಡಿದರೂ ಉತ್ತರಿಸದ ನಂತರ ಘಟನೆ ಬೆಳಕಿಗೆ ಬಂದಿದೆ. ಆಕೆಯ ಕೆಲಸದ ಸ್ಥಳದಲ್ಲಿ ವಿಚಾರಿಸಿದಾಗ, ಆಕೆ ಕರ್ತವ್ಯಕ್ಕೆ ವರದಿ ಮಾಡಿಲ್ಲ ಎಂದು ಅವರಿಗೆ ತಿಳಿದುಬಂದಿದೆ. ನಂತರ ಕುಟುಂಬವು ಪೊಲೀಸರನ್ನು ಸಂಪರ್ಕಿಸಿ ಕಾಣೆಯಾದ ವ್ಯಕ್ತಿಯ ದೂರನ್ನು ದಾಖಲಿಸಿತು.

ದೂರಿನ ಮೇರೆಗೆ, ಪೊಲೀಸರು ಆಯ್ಯುಬಿಯ ಮೊಬೈಲ್ ಫೋನ್ ಅನ್ನು ಗುರುಗ್ರಾಮದ ಸೆಕ್ಟರ್ -55 ನಲ್ಲಿರುವ ಮಲಿಕ್ ಅವರ ಪಿಜಿ ವಸತಿ ಗೃಹದಲ್ಲಿ ಪತ್ತೆಹಚ್ಚಿದರು. ಪೊಲೀಸರು ಬೀಗ ಒಡೆದು ನೋಡಿದಾಗ ನೆಲದ ಮೇಲೆ ರಕ್ತಸಿಕ್ತವಾಗಿ ಬಿದ್ದಿದ್ದ ಅಯೂಬಿಯ ದೇಹವು ಕಂಡುಬಂದಿದೆ. ಅಯೂಬಿಯ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಲಾಗಿದ್ದು, ಆಕೆಯ ಕುತ್ತಿಗೆಯಲ್ಲಿ ಹಲವಾರು ಇರಿತದ ಗಾಯಗಳು ಕಂಡುಬಂದಿವೆ.

ತನಿಖೆಯಿಂದ ಆ ಕೊಠಡಿಯನ್ನು ಶ್ರೇಷ್ಠ್ ಮಲಿಕ್ ಎಂಬ ವ್ಯಕ್ತಿ ಬಾಡಿಗೆಗೆ ಪಡೆದಿದ್ದ ಎಂದು ತಿಳಿದುಬಂದಿದೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ ಮೋದಿ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ ಬಿಜೆಪಿ ನಾಯಕರು

ಮುಸ್ಲಿಮರೇ ಫಸ್ಟ್ ಎಂದಿದ್ದ ಅರವಿಂದ ಬೋಳಾರ್ ಈಗ ಕೈ ಮುಗಿದು ಹೀಗೆ ಬೇಡಿಕೊಂಡ್ರು

ದೇಶಸೇವೆಗೆ ಸಮರ್ಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಜೀ: ವಿಜಯೇಂದ್ರ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಏಯ್ ನೀನೂ ಸ್ವಲ್ಪ ತಿನ್ನೋ… ನಂದಿ ತಿನ್ನಲಿಲ್ಲವೆಂದು ಕೋತಿ ಏನು ಮಾಡ್ತು ನೋಡಿ Video

ಮುಂದಿನ ಸುದ್ದಿ
Show comments