Daily Horoscope

Select Your Language

Notifications

webdunia
webdunia
webdunia
webdunia

ರೈಲು ಭೋಗಿಯಲ್ಲಿ ಫಸ್ಟ್ ನೈಟ್ ಸೆಟಪ್ ಆಯ್ತು, ಈಗ ಪೂಜೆ ವಿಡಿಯೋ ವೈರಲ್: ರೈಲ್ವೇ ಇಲಾಖೆ ಹೇಳಿದ್ದೇನು Video

Pooja in train
ರೈಲು ಬೋಗಿಯೊಂದರ ಒಳಗೆ ಪುರೋಹಿತರ ನೇತೃತ್ವದಲ್ಲಿ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಬೆನ್ನಲ್ಲೇ, ರೈಲ್ವೆ ನಿಯಮಗಳ ಕುರಿತು ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆ ಆರಂಭವಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರ ರೈಲ್ವೆ ಅಧಿಕೃತ ಸ್ಪಷ್ಟನೆ ನೀಡಿದೆ.

ಮೊನ್ನೆಯಷ್ಟೇ ರೈಲಿನ ಎಸಿ ಕೋಚ್ ನಲ್ಲಿ ಫಸ್ಟ್ ನೈಟ್ ಸೆಟಪ್ ಹಾಕಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಕೊನೆಗೆ ರೈಲ್ವೇ ಇಲಾಖೆ ಇಂತಹ ಕೆಲಸ ಮಾಡಿದ ಅಧಿಕಾರಿಗಳನ್ನೇ ಸಸ್ಪೆಂಡ್ ಮಾಡಿತ್ತು. ಇದೀಗ ರೈಲಿನ ಭೋಗಿಯಲ್ಲಿ ಪೂಜೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಇದಕ್ಕೂ ರೈಲ್ವೇ ಇಲಾಖೆ ಸ್ಪಷ್ಟನೆ ನೀಡಿದೆ.

ವೈರಲ್ ಆಗಿರುವ ವಿಡಿಯೋ ಸಾಮಾನ್ಯ ಪ್ರಯಾಣಿಕರು ಸಂಚರಿಸುವ ಬೋಗಿಗೆ ಸಂಬಂಧಿಸಿದ್ದಲ್ಲ. ಈ ಪೂಜೆಯು ಖಾಸಗಿಯಾಗಿ ಪ್ರತ್ಯೇಕವಾಗಿ ಬುಕ್ ಮಾಡಲಾಗಿದ್ದ 'ಸಲೂನ್ ಕಾರ್'  ನಲ್ಲಿ ನಡೆದಿದೆ ಎಂದು ಉತ್ತರ ರೈಲ್ವೆ ಸ್ಪಷ್ಟಪಡಿಸಿದೆ.

ವಿಶೇಷವಾಗಿ ಬುಕ್ ಮಾಡಲಾದ ಇಂತಹ ಬೋಗಿಗಳಲ್ಲಿ ಪ್ರವಾಸಿಗರು ಅಥವಾ ಬುಕ್ ಮಾಡಿದ ವ್ಯಕ್ತಿಗಳು ತಮ್ಮ ವೈಯಕ್ತಿಕ ಅಥವಾ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಳ್ಳಲು ರೈಲ್ವೆ ನಿಯಮಗಳ ಪ್ರಕಾರ ಅವಕಾಶವಿದೆ ಎಂದು ಇಲಾಖೆ ತಿಳಿಸಿದೆ.

ಸಾಮಾನ್ಯ ಬೋಗಿಯಲ್ಲಿ ಪೂಜೆ ನಡೆಸಲಾಗುತ್ತಿದೆ ಎಂದು ಭಾವಿಸಿ ಹಲವು ನೆಟ್ಟಿಗರು ಸುರಕ್ಷತೆ ಹಾಗೂ ಸಾರ್ವಜನಿಕ ಸ್ಥಳದ ನಿಯಮಗಳ ಬಗ್ಗೆ ಪ್ರಶ್ನೆ ಎತ್ತಿದ್ದರು. ಆದರೆ ರೈಲ್ವೆ ಇಲಾಖೆಯ ಈ ತಕ್ಷಣದ ಸ್ಪಷ್ಟನೆಯು ಸುಳ್ಳು ವದಂತಿಗಳಿಗೆ ಹಾಗೂ ಚರ್ಚೆಗಳಿಗೆ ತೆರೆ ಎಳೆದಿದೆ.

pic.twitter.com/9wgIkHyK3O

 

— ChotaNews App (@ChotaNewsApp) July 13, 2026

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ ಮದುವೆಯಾದ ನಾಲ್ಕೇ ತಿಂಗಳಿಗೆ ಯುವತಿ ಆತ್ಮಹತ್ಯೆ: ಡೆತ್ ನೋಟ್ ನಲ್ಲಿ ಶಾಕಿಂಗ್ ವಿಚಾರ