Select Your Language

Notifications

webdunia
webdunia
webdunia
webdunia

ದೇಶಾದ್ಯಂತ ಏಕರೂಪ ತೆರಿಗೆ ವ್ಯವಸ್ಥೆ ಜಾರಿ: ಸಚಿವ ಜೇಟ್ಲಿ

ದೇಶಾದ್ಯಂತ ಏಕರೂಪ ತೆರಿಗೆ ವ್ಯವಸ್ಥೆ ಜಾರಿ: ಸಚಿವ ಜೇಟ್ಲಿ
ನವದೆಹಲಿ , ಬುಧವಾರ, 29 ಮಾರ್ಚ್ 2017 (13:28 IST)
ಲೋಕಸಭೆಯಲ್ಲಿ ಜಿಎಸ್‌ಟಿ ಮಸೂದೆಯ ಬಗ್ಗೆ ಚರ್ಚೆ, ಜಿಎಸ್‌ಟಿ ಸಂಬಂಧ ನಾಲ್ಕು ವಿಧೇಯಕಗಳನ್ನು ಮಂಡಿಸಲಾಗಿದೆ ಎಂದು  ಕೇಂದ್ರ ವಿತ್ತಖಾತೆ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
 
ಲೋಕಸಭೆಯಲ್ಲಿ ಜಿಎಸ್‌ಟಿ ಮಸೂದೆ ಕುರಿತಂತೆ ಭಾಷಣ ಮಾಡಿದ ಜೇಟ್ಲಿ,  ತುಂಬಾ ಸಮಯದಿಂದ ಜಿಎಸ್‌ಟಿ ಮಸೂದೆಗಾಗಿ ಕಾಯುತ್ತಿದ್ದೇವೆ. ಜಿಎಸ್‌ಟಿ ಮಸೂದೆಯಿಂದ ದೇಶಾದ್ಯಂತ ಏಕರೂಪ ತೆರಿಗೆ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.
 
ಜಿಎಸ್‌ಟಿ ಮಸೂದೆ ಚರ್ಚೆ ಸಂದರ್ಭದಲ್ಲಿ ಪ್ರಧಾನಿ ಮೋದಿ ಸೇರಿದಂತೆ ಎಲ್ಲಾ ರಾಜ್ಯಗಳ ಸಂಸದರು ಪಾಲ್ಗೊಂಡಿದ್ದಾರೆ. ಎಲ್ಲಾ ರಾಜ್ಯಗಳು ಜಿಎಸ್‌ಟಿ ಮಸೂದೆಯನ್ನು ಬೆಂಬಲಿಸಿವೆ ಎಂದರು.
 
ಜಿಎಸ್‌ಟಿ ಕ್ರಾಂತಿಕಾರಿ ಮಸೂದೆಯಾಗಿದೆ. ದೇಶದಲ್ಲಿ ಜಿಎಸ್‌ಟಿ ಜಾರಿಯಿಂದ ದೇಶದ ಆರ್ಥಿಕತೆಗೆ ಹೊಸ ನಾಂದಿ ಹಾಡಲಿದೆ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಅಸಹಾಯಕ ಮಹಿಳೆಯರ ನೆರವಿಗೆ ಬಂದ ಸಿಎಂ ಯೋಗಿ