Select Your Language

Notifications

webdunia
webdunia
webdunia
webdunia

1952 ರ ನಂತರ ಅತಿ ಕಡಿಮೆ ಸಂಖ್ಯೆಯ ಮುಸ್ಲಿಂ ಸಂಸದರ ಆಯ್ಕೆ

1952 ರ ನಂತರ ಅತಿ ಕಡಿಮೆ ಸಂಖ್ಯೆಯ ಮುಸ್ಲಿಂ ಸಂಸದರ ಆಯ್ಕೆ
ನವದೆಹಲಿ , ಶನಿವಾರ, 17 ಮೇ 2014 (16:15 IST)
ಭಾರತದ ಲೋಕಸಭಾ ಚುನಾವಣಾ ಇತಿಹಾಸದ ಪ್ರಥಮ ಚುನಾವಣೆ 1952ರ ಬಳಿಕ ಪ್ರಥಮ ಬಾರಿಗೆ ಅತಿ ಕಡಿಮೆ ಸಂಖ್ಯೆಯ ಮುಸ್ಲಿಂ ಮತದಾರರು ಆಯ್ಕೆಯಾಗಿದ್ದಾರೆ.  
 
ಮೊದಲ ಚುನಾವಣೆಯ ನಂತರ ಇಲ್ಲಿಯವರೆಗಿನ ದಾಖಲೆಯಲ್ಲಿ  ಅತಿ ಕಡಿಮೆ ಎಂದರೆ 30 ಮುಸ್ಲಿಂ ಪ್ರತಿನಿಧಿಗಳು ಕಳೆದ ಬಾರಿ ನಡೆದ 15ನೇ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಬಂದಿದ್ದರು. ಆದರೆ ಈ ಬಾರಿ ಈ ಸಂಖ್ಯೆಯಲ್ಲಿ ಮತ್ತೂ ಇಳಿಕೆ ಕಂಡುಬಂದಿದ್ದು, ಜಯಗಳಿಸಿದ ಅಭ್ಯರ್ಥಿಗಳ ಸಂಖ್ಯೆ ಕೇವಲ 24. ಅಂದರೆ ಕೆಳಮನೆಯ ಬಲದಲ್ಲಿ ಅವರ ಪಾತ್ರ ಕೇವಲ 4.4%.  
 
1952ರಲ್ಲಿ ನಡೆದ ಪ್ರಥಮ ಲೋಕಸಭಾ ಚುನಾವಣೆಯಲ್ಲಿ ಕೇವಲ 4.3% ಮುಸ್ಲಿಮ‌ರು ಮಾತ್ರ ಲೋಕಸಭೆಯನ್ನು ಪ್ರವೇಶಿಸಿದ್ದರು. ನಂತರದ ದಶಕಗಳಲ್ಲಿ ಈ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದ್ದು, 1980ರಲ್ಲಿ ಈ ಸಂಖ್ಯೆ 49 ಅಂದರೆ 9.3% ಕಂಡು ಬಂದಿತ್ತು. 
 
ಪ್ರಥಮ ಬಾರಿ ಉತ್ತರಪ್ರದೇಶದಿಂದ ಓರ್ವ ಅಭ್ಯರ್ಥಿಯೂ ಆಯ್ಕೆಯಾಗಿಲ್ಲ. ಗಣನೀಯ ಪ್ರಮಾಣದ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಮಹಾರಾಷ್ಟ್ರದಲ್ಲೂ ಇದೇ ಸ್ಥಿತಿ ವ್ಯಕ್ತವಾಗಿದೆ. ಈ ಸಮುದಾಯದಿಂದ ಪ್ರತಿನಿಧಿಗಳು ಆಯ್ಕೆಯಾದ ರಾಜ್ಯಗಳೆಂದರೆ  ಪಶ್ಚಿಮ ಬಂಗಾಳ (ಎಂಟು), ಜಮ್ಮು ಕಾಶ್ಮೀರ (ನಾಲ್ಕು), ಬಿಹಾರ (ನಾಲ್ಕು), ಕೇರಳ (ಮೂರು), ಅಸ್ಸಾಂ (ಎರಡು) ಮತ್ತು ಆಂಧ್ರಪ್ರದೇಶ, ತಮಿಳುನಾಡು ಮತ್ತು ಲಕ್ಷದ್ವೀಪ (ಒಂದು). ಇವುಗಳಲ್ಲಿ, ಸಹಜವಾಗಿ ಜೆ & ಕೆ ಹಾಗೆಯೇ ಲಕ್ಷದ್ವೀಪ ಮುಸ್ಲಿಂ ಸಮುದಾಯ ಹೆಚ್ಚಳವಾಗಿರುವ ಪ್ರದೇಶಗಳಾಗಿವೆ. 
 
ಮ್ಯಾಜಿಕ್ ಸಂಖ್ಯೆಯನ್ನು ದಾಟಿ ಗೆಲುವು ಸಾಧಿಸಿರುವ ಬಿಜೆಪಿಯಲ್ಲಿ ಮುಸ್ಲಿಂ ಅಭ್ಯರ್ಥಿಗಳು ಇರಲಿಲ್ಲವಾದ್ದರಿಂದ ಕೆಳಮನೆಯಲ್ಲಿ ಅಲ್ಪಸಂಖ್ಯಾತರ ಸಂಖ್ಯೆ ಕಡಿಮೆ ಇರುವುದು ಆಶ್ಚರ್ಯ ಎನಿಸುತ್ತಿಲ್ಲ. 

Share this Story:

Follow Webdunia kannada