Select Your Language

Notifications

webdunia
webdunia
webdunia
webdunia

ಜಾರಿ ಬಿದ್ದ ಪತ್ನಿ ದೇಹದಡಿ ಸಿಲುಕಿದ ಪತಿ; ಇಬ್ಬರ ದುರ್ಮರಣ

Elderly couple
ರಾಜ್ಕೋಟ್ , ಮಂಗಳವಾರ, 5 ಜುಲೈ 2016 (16:02 IST)
ರಾಜ್ಕೋಟ್‌ನಲ್ಲೊಂದು ವಿಚಿತ್ರ ಘಟನೆ ನಡೆದಿದ್ದು 128 ಕೆಜಿ ತೂಕದ ಪತ್ನಿಯ ದೇಹದಡಿಗೆ ಸಿಕ್ಕಿ ಪತಿ ದಾರುಣವಾಗಿ ಸಾವನ್ನಪ್ಪಿದ್ದಾನೆ.  ರಾಮಧಾಮ ಸೊಸೈಟಿಯ ಕಲವಾಡ ರಸ್ತೆಯಲ್ಲಿ ಸೋಮವಾರ ಈ ಘಟನೆ ನಡೆದಿದೆ.
 
ಘಟನೆ ವಿವರ: 68 ವರ್ಷದ ಮಹಿಳೆ ಮಂಜುಳಾ ವಿತ್ಲಾನಿ ಮತ್ತು ಆಕೆಯ ಪತಿ ನಟವರರಾಲ್ ಮನೆಯ ಕೆಳಮಹಡಿಯಲ್ಲಿ ವಾಸಿಸುತ್ತಿದ್ದರು. ಆಕೆಯ ಮಗ ಆಶೀಶ್ ಪತ್ನಿ ನಿಶಾ ಜತೆಯಲ್ಲಿ ಮೊದಲ ಮಹಡಿಯಲ್ಲಿ ವಾಸವಾಗಿದ್ದ. ಸೋಮವಾರ ನಸುಕಿನ ಜಾವ 4 ಗಂಟೆಗೆ ಆಶೀಶ್‌ಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಹೀಗಾಗಿ ಆತನ ಪತ್ನಿ ಔಷಧಿ ತೆಗೆದುಕೊಂಡು ಹೋಗಲು ಕೆಳ ಮಹಡಿಗೆ ಧಾವಿಸಿದ್ದಾಳೆ. ಮಗನ ಆರೋಗ್ಯ ಕೆಟ್ಟಿದೆ ಎಂದು ಆತಂಕದಿಂದ ತಾಯಿ ಮಂಜುಳಾ ಸಹ ಗಡಿಬಿಡಿಯಲ್ಲಿ ಮೊದಲ ಮಹಡಿಯ ಮೆಟ್ಟಿಲುಗಳನ್ನು ಏರುತ್ತಿರುವಾಗ ಪತಿ ನಟವರಲಾಲ್ ಆಕೆಯನ್ನು ಹಿಂಬಾಲಿಸಿದ್ದಾನೆ. ಆ ಸಂದರ್ಭದಲ್ಲಿ ಮಂಜುಳಾ ಜಾರಿ ತನ್ನನ್ನು ಹಿಂಬಾಲಿಸುತ್ತಿದ್ದ ಪತಿಯ ಮೈಮೇಲೆ ಬಿದ್ದಿದ್ದಾರೆ. ಪರಿಣಾಮ ಪತಿ ಆಕೆಯ ದೇಹದಡಿ ಸಿಕ್ಕು ಅಪ್ಪಚ್ಚಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಮೆದುಳಿನ ರಕ್ತಸ್ರಾವದಿಂದಾಗಿ ಇಬ್ಬರು ಮೃತ ಪಟ್ಟಿದ್ದಾರೆ. 
 
ಅತ್ತೆ-ಮಾವ ಬೀಳುತ್ತಿರುವುದನ್ನು ನೋಡಿದ ಸೊಸೆ ಅವರನ್ನು ರಕ್ಷಿಸಲು ಪ್ರಯತ್ನಿಸಿದಾಗ ಆಕೆ ಸಹ ಜಾರಿ ಕೆಳಕ್ಕೆ ಬಿದ್ದಿದ್ದಾಳೆ. ಆಕೆಯ ಕಾಲಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ಸೇರಿಸಲಾಗಿದೆ. 
 
ಅನಾರೋಗ್ಯದಿಂದ ಬಳಲುತ್ತಿದ್ದ ಮಗನ ಬಗ್ಗೆ ದಂಪತಿ ಸದಾ ಆತಂಕದಲ್ಲಿರುತ್ತಿದ್ದರು. ಇದೇ ಆತಂಕದಲ್ಲಿ ಧಾವಿಸುತ್ತಿರುವಾಗ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಆರೋಪಗಳಿಂದಾಗಿ ಡಿವೈಎಸ್‌ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆಗೆ ಶರಣಾಗಿರಬಹುದು: ಸಿಎಂ