''ನೀವು ಮುಳುಗಿರಿ ಅಥವಾ ಸಾಯಿರಿ, ಅದು ನಮಗೆ ಸಂಬಂಧಿಸಿಲ್ಲ, ಆದರೆ ನೀವು ಸ್ಥಿರಾಸ್ತಿ ಖರೀದಿದಾರರಿಗೆ ಹಣ ಹಿಂತಿರುಗಿಸಲೇ ಬೇಕು. ನಮಗೆ ನಿಮ್ಮ ಆರ್ಥಿಕ ಸ್ಥಿತಿಗತಿಯ ಬಗ್ಗೆ ಎಳ್ಳಷ್ಟೂ ಚಿಂತೆಯಿಲ್ಲ ''
ದೀಪಕ್ ಮಿಶ್ರಾ ಮತ್ತು ಆದರ್ಶ್ ಕುಮಾರ್ ಗೋಯೆಲ್ ಅವರಿದ್ದ ಸುಪ್ರೀಂಕೋರ್ಟ್ ಪೀಠವು ಸೂಪರ್‌ಟೆಕ್ ಕಂಪನಿಗೆ ಮೇಲಿನಂತೆ ಕಠಿಣ ಸಂದೇಶ ನೀಡಿದೆ. ಗೃಹ ಖರೀದಿದಾರರಿಗೆ ಹಣ ವಾಪಸ್ ನೀಡಲು ತಮ್ಮ ಬಳಿ ಹಣವಿಲ್ಲವೆಂದು ಕೆಲವು ಕಟ್ಟಡ ನಿರ್ಮಾಣಗಾರರು ಅಸಹಾಯಕತೆ ವ್ಯಕ್ತಪಡಿಸಿದಾಗ ಸುಪ್ರೀಂಕೋರ್ಟ್‌ನಿಂದ ಖಾರವಾದ ಪ್ರತಿಕ್ರಿಯೆ ಹೊರಬಿತ್ತು.
ಸುಪ್ರೀಂಕೋರ್ಟ್ ಖಡಕ್ ಆದೇಶದಿಂದ ತಮ್ಮ ಕನಸಿನ ಮನೆಗಳಿಗೆ ಕೊನೆಯಿಲ್ಲದೇ ಕಾಯುತ್ತಿದ್ದ ಗೃಹ ಖರೀದಿದಾರರು ಸ್ವಲ್ಪ ಮಟ್ಟಿಗೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಸುಪ್ರೀಂಕೋರ್ಟ್ ಸೂಪರ್‌ಟೆಕ್ ಎಂಬ ಕಂಪನಿಗೆ 17 ಗೃಹ ಖರೀದಿ ಗ್ರಾಹಕರ ಮೊತ್ತದಲ್ಲಿ ಮಾಸಿಕ ಶೇ. 10ರಷ್ಟನ್ನು ನಾಲ್ಕು ವಾರಗಳಲ್ಲಿ ವಾಪಸ್ ನೀಡುವಂತೆ ನಿರ್ದೇಶಿಸಿದೆ. ಸೂಪರ್‍ಟೆಕ್ ಮುಂದಿನ ವಿಚಾರಣೆ ದಿನಾಂಕದಂದು 17 ಗ್ರಾಹಕರಿಗೆ ಪಾವತಿ ಮಾಡಿದ ರೂಪುರೇಷೆಯನ್ನು ಹಾಜರುಪಡಿಸುವಂತೆ ಸೂಚಿಸಿತು. ಸೂಪರ್‌ಟೆಕ್ ಪರ ಹಾಜರಾದ ಹಿರಿಯ ವಕೀಲ ರಾಜೀವ್ ಧವನ್, ಸುಪ್ರೀಂಕೋರ್ಟ್ ಬ್ಯಾಂಕರ್ ರೀತಿ ವರ್ತಿಸಬಾರದು, ಸಮಾನತೆಯ ತತ್ವವನ್ನು ಅನುಸರಿಸಬೇಕು ಎಂದು ಹೇಳಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ