ನವದೆಹಲಿ : ಟರ್ಕಿ-ಸಿರಿಯಾ ಗಡಿಯಲ್ಲಿ ಪ್ರಬಲ ಭೂಕಂಪದ ಬಗ್ಗೆ ಮೂರು ದಿನ ಮೊದಲೇ ಸುಳಿವು ನೀಡಿದ್ದ ಡಚ್ ಸಂಶೋಧಕ ಫ್ರಾಂಕ್ ಹೂಗರ್ಬಿಟ್ಸ್ ಭಾರತದ ವಿಚಾರದಲ್ಲಿ ನೀಡಿದ್ದ ಹೇಳಿಕೆಯೂ ನಿಜವಾಗಿದೆ.
ಶೀಘ್ರದಲ್ಲೇ ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನದಲ್ಲಿ ಭೂಕಂಪನ ಸಂಭವಿಸಲಿದೆ ಎಂದು ಫೆಬ್ರವರಿ 6ರಂದು ವಿಡಿಯೋ ಸಂದೇಶ ನೀಡಿದ್ದರು. ಕಾಕತಾಳಿಯ ಎಂಬಂತೆ, ಕಳೆದ ಮೂರು ದಿನಗಳಿಂದ ದೇಶದ ವಿವಿಧೆಡೆ ಭೂಮಿ ಕಂಪಿಸತೊಡಗಿದೆ.
ಶನಿವಾರ ಗುಜರಾತ್ನಲ್ಲಿ 3.8 ತೀವ್ರತೆಯ ಭೂಕಂಪ, ಭಾನುವಾರ ಅಸ್ಸಾಂನಲ್ಲಿ 4.0 ತೀವ್ರತೆಯ ಭೂಕಂಪ ಸಂಭವಿಸಿದೆ.
ಬೆಳಗಿನ ಜಾವ ಸಿಕ್ಕೀಂನಲ್ಲಿ 4.3 ತೀವ್ರತೆಯ ಭೂಕಂಪನವಾಗಿದೆ. ಇದೇ ವೇಳೆ, ಅಫ್ಘಾನಿಸ್ತಾನ, ಇಂಡೋನೇಷ್ಯಾದಲ್ಲೂ ಇಷ್ಟೇ ತೀವ್ರತೆಯ ಭೂಕಂಪನವಾಗಿದೆ. ಅದೃಷ್ಟವಶಾತ್ ಎಲ್ಲಿಯೂ ಯಾವುದೇ ಸಾವು ನೋವು ಸಂಭವಿಸಿಲ್ಲ. ಹೂಗರ್ಬೀಟ್ಸ್ ಹೇಳಿಕೆಯಂತೆಯೇ ಭೂಕಂಪ ಸಂಭವಿಸಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.