Daily Horoscope
✕

ಕುಡಿದ ಅಮಲಿನಲ್ಲಿ ವಿಮಾನದಲ್ಲಿ ಬಾಂಬ್ ಇದೆ ಎಂದ!

Webdunia
ಭಾನುವಾರ, 28 ಆಗಸ್ಟ್ 2022 (13:27 IST)
ಚೆನ್ನೈ : ತನ್ನ ಕುಟುಂಬ ವಿದೇಶಕ್ಕೆ ಹೋಗಬಾರದು, ಅವರನ್ನು ತಡೆಯಬೇಕು ಎಂಬ ಉದ್ದೇಶದಿಂದ ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ,

ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂದು ಹುಸಿ ಬೆದರಿಕೆ ಒಡ್ಡಿದ್ದಾನೆ. ಈ ಘಟನೆ ಚೆನ್ನೈನಲ್ಲಿ ನಡೆದಿದೆ.

ಚೆನ್ನೈನ ವ್ಯಕ್ತಿ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ, ಶನಿವಾರ ದುಬೈಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂದು ಹೇಳಿದ್ದಾನೆ. ತಕ್ಷಣ ಭದ್ರತಾ ಏಜೆನ್ಸಿಗಳು ವಿಮಾನದಲ್ಲಿ ಸಂಪೂರ್ಣ ತಪಾಸಣೆ ನಡೆಸಿ, ಅಂತಹ ಯಾವುದೇ ವಸ್ತುಗಳು ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡಿದ್ದಾರೆ.

ವರದಿಗಳ ಪ್ರಕಾರ ಇಂದು ಬೆಳಗ್ಗೆ 7:20ಕ್ಕೆ ಇಂಡಿಗೋ ವಿಮಾನ ಚೆನ್ನೈ ವಿಮಾನ ನಿಲ್ದಾಣದಿಂದ ದುಬೈಗೆ ತೆರಳಬೇಕಿತ್ತು. ಆದರೆ ಬಾಂಬ್ ಬೆದರಿಕೆಯ ಹಿನ್ನೆಲೆ ನಿರ್ಗಮನ ವಿಳಂಬವಾಗಿತ್ತು. ಬಳಿಕ ಸುಮಾರು 180 ಪ್ರಯಾಣಿಕರಿಗೆ ವಸತಿ ಒದಗಿಸಲಾಗಿದೆ.

ವಿಮಾನದಲ್ಲಿ ಯಾವುದೇ ಸ್ಫೋಟಕ ವಸ್ತುಗಳು ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕ ಪೊಲೀಸರು ಕರೆ ಮಾಡಿದ ವ್ಯಕ್ತಿಯನ್ನು ಪತ್ತೆ ಹಚ್ಚಿ, ಬಂಧಿಸಿದ್ದಾರೆ. ಬಳಿಕ ಆ ವ್ಯಕ್ತಿ ತನ್ನ ಕುಟುಂಬದವರು ವಿದೇಶಕ್ಕೆ ಹೋಗುವುದನ್ನು ತಡೆಯುವ ಉದ್ದೇಶದಿಂದ ಈ ರೀತಿ ಹುಸಿ ಬಾಂಬ್ ಕರೆ ನೀಡಿರುವುದಾಗಿ ತಿಳಿಸಿದ್ದಾನೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಂಗಳೂರು, ಬೆಂಗಳೂರು ವಂದೇ ಭಾರತ್ ಎಕ್ಸ್ ಪ್ರೆಸ್ ಶುರು: ಟಿಕೆಟ್ ದರ, ಸಮಯ ಸಂಪೂರ್ಣ ಮಾಹಿತಿ ಇಲ್ಲಿದೆ

ಬೆಂಗಳೂರಿಗೆ ಬಂದ ನಮೋ: ಮೋದಿ, ಡಿಕೆ ಶಿವಕುಮಾರ್ ಫುಲ್ ನಗು, ತಮಾಷೆ..

ಮೈಸೂರಿಗೆ ಮೋದಿ ಬರುತ್ತಿದ್ದಂತೇ ಮೋದಿ ಎಲ್ಲಿಗೂ ಹೋಗಲ್ಲ ಭಿತ್ತಿ ಪತ್ರ ಪ್ರದರ್ಶಿಸಿದ ಬಿಜೆಪಿ ಬೆಂಬಲಿಗರು

ಮಂಚಕ್ಕೆ ಬರ್ತೀಯಾ… ಪಿಕ್ ಅಪ್ ಲೊಕೇಷನ್ ಕೇಳಲು ಫೋನ್ ಮಾಡಿದ ಕ್ಯಾಬ್ ಚಾಲಕ ಯುವತಿ ಬಳಿ ಕೇಳಿದ್ದು ಅದನ್ನು Video

ಸೋ ಸಿಂಪಲ್ ನಿರ್ಮಲಾ ಸೀತಾರಾಮನ್.. ಮೇಲುಕೋಟೆಯಲ್ಲಿ ಹಾಳೆ ತಟ್ಟೆಯಲ್ಲಿ ನೆಲದ ಮೇಲೆ ಕೂತು ಪ್ರಸಾದ ಸೇವಿಸಿದ ಸಚಿವೆ Video

ಮುಂದಿನ ಸುದ್ದಿ
Show comments