ಡ್ರೋನ್ ಗೆ ಲೈಸೆನ್ಸ್ ಅಗತ್ಯವಿಲ್ಲ: ಕೇಂದ್ರ

Webdunia
ಭಾನುವಾರ, 13 ಫೆಬ್ರವರಿ 2022 (13:40 IST)
ನವದೆಹಲಿ : ದೇಶದಲ್ಲಿ ಡ್ರೋನ್ಗಳನ್ನು ಚಲಾಯಿಸಲು ಡ್ರೋನ್ ಪೈಲಟ್ ಪರವಾನಗಿ ಅಗತ್ಯವನ್ನು ನಾಗರಿಕ ವಿಮಾನಯಾನ ಸಚಿವಾಲಯ ಶುಕ್ರವಾರ ರದ್ದುಗೊಳಿಸಿದೆ.

ಡಿಜಿಸಿಎ-ಅನುಮೋದಿತ ಡ್ರೋನ್ ಶಾಲೆಯಿಂದ ಸಿಂಗಲ್ ವಿಂಡೋ ಡಿಜಿಟಲ್ ಸ್ಕೈ  ಪ್ಲಾಟ್ಫಾರ್ಮ್ ಮೂಲಕ ನೀಡಲಾದ ರಿಮೋಟ್ ಪೈಲಟ್ ಪ್ರಮಾಣಪತ್ರ ಭಾರತದಲ್ಲಿ ಡ್ರೋನ್ ಕಾರ್ಯನಿರ್ವಹಿಸಲು ಸಾಕಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಾಣಿಜ್ಯೇತರ ಉದ್ದೇಶಗಳಿಗಾಗಿ 2 ಕೆಜಿ ವರೆಗಿನ ಡ್ರೋನನ್ನು ನಿರ್ವಹಿಸಲು ಯಾವುದೇ ರಿಮೋಟ್ ಪೈಲಟ್ ಪ್ರಮಾಣಪತ್ರದ ಅಗತ್ಯವಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ ಎಂದು ಗ್ಯಾಜೆಟ್ 360 ವರದಿ ಮಾಡಿದೆ.

ಡ್ರೋನ್ ನಿಯಮಗಳನ್ನು ತಿದ್ದುಪಡಿ ಮಾಡುವ ಅಧಿಸೂಚನೆಯನ್ನು ಸಚಿವಾಲಯವು ಹೊರಡಿಸಿದ್ದು  ಫೆಬ್ರವರಿ 11 ರಿಂದ ಜಾರಿಗೆ ಬರುವಂತೆ ಡ್ರೋನ್ ಪೈಲಟ್ ಪರವಾನಗಿಯ ಅಗತ್ಯವನ್ನು ರದ್ದುಗೊಳಿಸಲಾಗಿದೆ.

ದೇಶದಲ್ಲಿ ಡ್ರೋನ್ಗಳ ದೇಶೀಯ ಉತ್ಪಾದನೆಯನ್ನು ಉತ್ತೇಜಿಸುವ ಪ್ರಯತ್ನಗಳ ಭಾಗವಾಗಿ ಕೆಲವು ವಿನಾಯಿತಿಗಳೊಂದಿಗೆ ಸರ್ಕಾರವು ಡ್ರೋನ್ಗಳ ಆಮದನ್ನು ನಿಷೇಧಿಸಿದ  ನಂತರ ಈಗ ಡ್ರೋನ್ ಪೈಲಟ್ ಪರವಾನಗಿ ಅಗತ್ಯವನ್ನು ಸರ್ಕಾರ ರದ್ದುಗೊಳಿಸಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಆರ್‌ಎಸ್‌ಎಸ್‌ ದೆವ್ವವಿದ್ದಂತೆ ಎಂದ ಪ್ರಿಯಾಂಕ್ ಖರ್ಗೆ ಪರ ಬ್ಯಾಟ್ ಬೀಸಿದ ಶಿವರಾಜ ತಂಗಡಗಿ

ಮುಸ್ಲಿಂರನ್ನು ಗುರಿಯಾಗಿಸಿ ಗುಂಡು ಹಾರಿಸುತ್ತಿರುವ ಘಟನೆ, ಅಸ್ಸಾಂ ಸಿಎಂ ವಿರುದ್ಧ ಮಹತ್ವದ ತೀರ್ಪು

ತ್ರಿಷಾ ಗುಂಗಿನಿಂದ ವಿಜಯ್ ಆಚೆ ಬರಬೇಕೆಂದ ಬಿಜೆಪಿ ನಾಯಕ ನೈನಾರ್ ವಿರುದ್ಧ ನಟಿ ಗರಂ

ವಿದೇಶಿ ಮಹಿಳೆ, ಹೋಂ ಸ್ಟೆ ಒಡತಿ ಮೇಲೆ ಅತ್ಯಾಚಾರ ಪ್ರಕರಣ: ಅಪರಾಧಿಗಳ ವಿರುದ್ಧ ಮಹತ್ವದ ತೀರ್ಪು

ಭಿವಾಡಿ ಕೆಮಿಕಲ್ ಫ್ಯಾಕ್ಟರಿ ಘಟನೆಗೆ ಪ್ರಧಾನಿ ಮೋದಿ ಸಂತಾಪ

ಮುಂದಿನ ಸುದ್ದಿ
Show comments