ಪ್ರಯಾಗ್ ರಾಜ್: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಕೆಲವೊಂದು ಕೆಲಸಗಳನ್ನು ಮಾಡುವುದು ನಿಷಿದ್ಧವಾಗಿದೆ. ಕುಂಭಮೇಳಕ್ಕೆ ಹೋಗಲು ತಯಾರಿ ನಡೆಸಿರುವವರು ಗಮನಿಸಬೇಕಾದ ಅಂಶಗಳಿವು.
ಕುಂಭಮೇಳ ಹಿಂದೂ ಧಾರ್ಮಿಕ ಮಹೋತ್ಸವ. ಇಲ್ಲಿ ಆಧ್ಯಾತ್ಮಿಕ ವಿಚಾರಗಳು, ಭಗವಂತನ ನಾಮಸ್ಮರಣೆಗೆ ಮಾತ್ರ ಅವಕಾಶ. ಅದರ ಹೊರತಾಗಿ ಕೆಲವೊಂದು ಕೆಲಸಗಳನ್ನು ಮಾಡುವುದಕ್ಕೆ ಇಲ್ಲಿ ನಿಷೇಧವಿದೆ.
ಮಧ್ಯಪಾನ, ಧೂಮಪಾನ ನಿಷೇಧ: ಕುಂಭಮೇಳಕ್ಕೆ ಹೋಗುವವರು ಮದ್ಯಪಾನ, ಧೂಮಪಾನ ಅಭ್ಯಾಸವಿದ್ದರೆ ಅಲ್ಲಿ ಇದಕ್ಕೆ ಅವಕಾಶವಿಲ್ಲ. ಅಂತಹ ವಸ್ತುಗಳನ್ನೂ ಅಲ್ಲಿಗೆ ತೆಗೆದುಕೊಂಡು ಹೋಗುವಂತಿಲ್ಲ. ಮಾಂಸಾಹಾರ: ಮೊದಲೇ ಹೇಳಿದಂತೆ ಇದು ಪಕ್ಕಾ ಧಾರ್ಮಿಕ ಕಾರ್ಯಕ್ರಮ. ಇಲ್ಲಿ ಮಾಂಸಾಹಾರ ವಸ್ತುಗಳ ಮಾರಾಟ ಅಥವಾ ತೆಗೆದುಕೊಂಡು ಹೋಗುವುದಕ್ಕೆ ಅವಕಾಶವಿಲ್ಲ. ಕಸ ಬಿಸಾಡಬೇಡಿ: ಗಂಗಾ ನದಿ ತಟದಲ್ಲಿ ನಡೆಯುವ ಪವಿತ್ರ ಮೇಳದಲ್ಲಿ ಅಷ್ಟೇ ಶುದ್ಧತೆ ಕಾಪಾಡುವುದು ನಿಮ್ಮ ಕರ್ತವ್ಯವಾಗಿರುತ್ತದೆ. ಎಲ್ಲೆಂದರಲ್ಲಿ ಕಸ ಬಿಸಾಕುವುದು, ಗಂಗಾ ನದಿಗೆ ಕಸ ಬಿಸಾಕಿ ಕಲುಷಿತ ಮಾಡುವುದು ಮಾಡಬೇಡಿ. ಫೋಟೋಗ್ರಫಿಗೆ ನಿಷೇಧ: ಸೂಕ್ತ ಒಪ್ಪಿಗೆ ಇಲ್ಲದೇ ಇಲ್ಲಿ ಎಲ್ಲೆಂದರಲ್ಲಿ ಫೋಟೋ ಕ್ಲಿಕ್ಕಿಸಿ ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಡುವಂತಿಲ್ಲ. ಬೆಲೆಬಾಳುವ ವಸ್ತುಗಳು ಬೇಡ: ಕುಂಭಮೇಳದಲ್ಲಿ ಜನ ಸಾಗರವೇ ಹರಿದುಬರುತ್ತಿದ್ದು, ಇಲ್ಲಿಗೆ ಚಿನ್ನ, ಬೆಳ್ಳಿ ಮೊದಲಾದ ಬೆಲೆ ಬಾಳುವ ವಸ್ತುಗಳನ್ನು ಕೊಂಡೊಯ್ಯದೇ ಇರುವುದು ನಿಮಗೇ ಉತ್ತಮ.
ನಿಮ್ಮ ಬ್ಯಾಗ್, ಮತ್ತಿತರ ವಸ್ತುಗಳಿಗೆ ನೀವೇ ಜವಾಬ್ಧಾರಿಯಾಗಿರುತ್ತೀರಿ. ಕುಂಭಮೇಳದಲ್ಲಿ ನೀವು ತಂಗಿದ್ದ ಸ್ಥಳದಿಂದ ತೆರಳುವಾಗಲೂ ನಿಮ್ಮೆಲ್ಲಾ ವಸ್ತುಗಳನ್ನೂ ಜೊತೆಗೇ ಕೊಂಡೊಯ್ಯಲು ಮರೆಯದಿರಿ.